ಕರ್ನಾಟಕದಲ್ಲಿ 53 ಎಫ್‌ಎಂ ಸ್ಥಾಪನೆಗೆ ಅನುಮತಿ – ಯಾವ ನಗರಗಳಲ್ಲಿ ಬರಲಿದೆ?

Public TV
1 Min Read

ನವದೆಹಲಿ: ಕರ್ನಾಟಕ (Karnataka) 53 ಸೇರಿದಂತೆ ದೇಶಾದ್ಯಂತ 234 ನಗರಗಳಲ್ಲಿ 730 ಹೊಸ ಎಫ್‌ಎಂ (FM) ಚಾನೆಲ್‌ ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಇ-ಹರಾಜು ಮೂಲಕ ಖಾಸಗಿ ಸಂಸ್ಥೆಗಳಿಗೆ ಎಫ್‌ಎಂ ಚಾನೆಲ್ ಅವಕಾಶ ಸಿಗಲಿದ್ದು 730 ಚಾನೆಲ್‌ಗಳಿಗೆ 784.87 ಕೋಟಿ ರೂ ಮೂಲ ಬಿಡ್ಡಿಂಗ್ ಮೊತ್ತ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.78 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ ಬೆಟಗೇರಿ, ಹಾಸನ, ಹೊಸಪೇಟೆ, ಉಡುಪಿ ಸೇರಿದಂತೆ 16 ನಗರಗಳಲ್ಲಿ 53 ಎಫ್‌ಎಂ ಕೇಂದ್ರ ತೆರೆಯಲು ಅನುಮತಿ ಸಿಕ್ಕಿದೆ.

ಇದರಿಂದ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ. ಸ್ಥಳೀಯ ಉಪಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ಸಿಗಲಿದೆ ಎಂದು ಸರ್ಕಾರ ಹೇಳಿದೆ.

 

Share This Article