ವಾಲ್ಮೀಕಿ ಹಗರಣ – ನಾಗೇಂದ್ರ ಆಪ್ತರ ಮನೆ ಮೇಲೆ ED ದಾಳಿ

By
1 Min Read

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ‌ (Valmiki Development Corporation Scam) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ (B Nagendra) ಆಪ್ತರ ಮನೆ ಮೇಲೆ ಬುಧವಾರ ಇ.ಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರಿನಲ್ಲಿ ಏಕಕಾಲಕ್ಕೆ ಇ.ಡಿ ದಾಳಿ ನಡೆಸಿದೆ. ನಾಗೇಂದ್ರ ಆಪ್ತ ಸಂಬಂಧಿ ಎರ‍್ರಿಸ್ವಾಮಿ ಮನೆ ಸೇರಿದಂತೆ ಕೆಲ ಸಹಾಯಕರು ಹಾಗೂ ಆಪ್ತರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಾರ್ಜ್‌ಶೀಟ್ ಸಲ್ಲಿಕೆಗೆ ಸಮಯ ಹತ್ತಿರ ಬರುತ್ತಿರುವ ಹಿನ್ನೆಲೆ ಇ.ಡಿ ಅಧಿಕಾರಿಗಳ ದಾಳಿ ಚುರುಕುಗೊಂಡಿದೆ. ಇದನ್ನೂ ಓದಿ: ಜನ್‌ಧನ್ ಯೋಜನೆಯಿಂದ ಕೋಟ್ಯಂತರ ಜನರಿಗೆ ಅನುಕೂಲ – 10ರ ಸಂಭ್ರಮಕ್ಕೆ ಮೋದಿ ಹರ್ಷ

ಇನ್ನು ನಾಗೇಂದ್ರ ಆಪ್ತ ವಿಜಯ ಕುಮಾರ್ ಮನೆ ಮೇಲೂ ಇ.ಡಿ ದಾಳಿ ನಡೆಸಿದೆ. ಬಳ್ಳಾರಿಯಲ್ಲಿ ನಾಗೇಂದ್ರ ಅವರ ಒಟ್ಟು ನಾಲ್ಕು ಜನ ಅಪ್ತರ ಮನೆಯ ಮೇಲೆ ಇ.ಡಿ ದಾಳಿಯಾಗಿದೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ – ಮೂವರು ಯೋಧರು ಹುತಾತ್ಮ

Share This Article