ಅಂದು ಶೂಟಿಂಗ್‌ಗೆ ಹೋಗಿದ್ದ ಜೈಲಿಗೆ ದರ್ಶನ್‌ ಶಿಫ್ಟ್‌

By
1 Min Read

ಬೆಂಗಳೂರು: ಬಳ್ಳಾರಿ ಜೈಲಿಗೆ (Ballari Jail) ದರ್ಶನ್‌ (Darshan) ಎರಡನೇ ಬಾರಿ ಹೋಗುತ್ತಿದ್ದಾರೆ.

ಹೌದು. 2017ರಲ್ಲಿ ತೆರೆ ಕಂಡಿದ್ದ ಕನ್ನಡದ ಚೌಕ (Chowka) ಸಿನಿಮಾದ ಶೂಟಿಂಗ್‌ (Shooting) ಈ ಜೈಲಿನಲ್ಲಿ ನಡೆದಿತ್ತು. ಕೊನೆ ಭಾಗವನ್ನು ಜೈಲಿನಲ್ಲಿರುವ ಖಾಲಿ ಸೆಲ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.

ಈ ಚಿತ್ರದ ಶೂಟಿಂಗ್‌ಗಾಗಿ ದರ್ಶನ್‌ ಜೈಲಿಗೆ ಆಗಮಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ರಾಬರ್ಟ್ ಹೆಸರಿನ ಪಾತ್ರ ಮಾಡಿದ್ದರು. ಅಂದು ಶೂಟಿಂಗ್‌ಗಾಗಿ ಆಗಮಿಸಿದ್ದ ದರ್ಶನ್‌ ಈಗ ಅದೇ ಜೈಲಿನಲ್ಲಿ ಸೆರೆವಾಸಕ್ಕೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ; ಮತ್ತೆ ಮೂವರು ಪೊಲೀಸರು ಅಮಾನತು

 ಬಳ್ಳಾರಿ ಜೈಲಿನಲ್ಲಿ ವಿವಿಐಪಿ ಅತಿಥ್ಯ ಸಿಗಲು ಸಾಧ್ಯವಿಲ್ಲ. ಭೀಮಾ ತೀರದ ಹಂತಕರು, ಕೆಜೆ ಹಳ್ಳಿ, ಡಿಜೆ ಹಳ್ಳಿ ಆರೋಪಿಗಳು. ನಟೋರಿಯಸ್‌ ರೌಡಿಗಳನ್ನು ಇದೇ ಬಳ್ಳಾರಿ ಜೈಲಿಗೆ ತಂದು ಹಾಕಲಾಗಿತ್ತು. ಬಳ್ಳಾರಿ ಜೈಲಲ್ಲಿ ಯಾವುದೇ ವಿಲಾಸಿ ಜೀವನಕ್ಕೆ ಅವಕಾಶ ಇಲ್ಲ.

ಇಂದು ದರ್ಶನ್‌ ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರೆದುರು ಹಾಜರುಪಡಿಸಲಾಗುತ್ತದೆ. ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆಯಿದೆ.

ನ್ಯಾಯಾಧೀಶರು ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದ ಬಳಿಕ ಮಧ್ಯಾಹ್ನ 1 ಗಂಟೆ ಬಳಿಕ ಬಿಗಿ ಭದ್ರತೆಯಲ್ಲಿ ಪೊಲೀಸರು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಿದ್ದಾರೆ.

 

Share This Article