3 ವರ್ಷಗಳಿಂದ ಸೆಕ್ಸ್ ಮಾಡಿಲ್ಲ- ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್

Public TV
1 Min Read

ಬಿಗ್ ಬಾಸ್ (Bigg Boss) ಬೆಡಗಿ ಉರ್ಫಿ ಜಾವೇದ್ (Urfi Javed) ಸದ್ಯ ‘ಫಾಲೋ ಕರ್ ಲೋ ಯಾರ್’ ಎಂಬ ಶೋನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಖಾಸಗಿ ಬದುಕಿನ ಬಗ್ಗೆ ಮುಕ್ತವಾಗಿ ನಟಿ ಮಾತನಾಡಿದ್ದಾರೆ. ಕಳೆದ 3 ವರ್ಷಗಳಿಂದ ನಾನು ಸೆಕ್ಸ್ ಮಾಡಿಲ್ಲ ಎಂದಿದ್ದಾರೆ. ಅದಕ್ಕೆ ಅಸಲಿ ಕಾರಣವನ್ನು ನಟಿ ತಿಳಿಸಿದ್ದಾರೆ.

ನಾನು ಕಳೆದ 3 ವರ್ಷಗಳಿಂದ ಯಾರ ಜೊತೆಯೂ ದೈಹಿಕ ಸಂಪರ್ಕ ನಡೆಸಿಲ್ಲ. ಯಾರಿಗೂ ಕಿಸ್ ಕೂಡ ಮಾಡಿಲ್ಲ. ಯಾಕೆ ಎಂಬುದನ್ನು ಕೂಡ ನಟಿ ಮಾತನಾಡಿ, ನನ್ನ ಬಳಿ ಎಲ್ಲಿಯವರೆಗೂ ಪ್ರೈವೇಟ್ ಜೆಟ್ ಇರುವುದಿಲ್ಲವೋ ಅಲ್ಲಿ ತನಕ ಸೆಕ್ಸ್ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ ಎಂದಿದ್ದಾರೆ. ಇದನ್ನೂ ಓದಿ:ದೇವಸ್ಥಾನ ಪ್ರವೇಶ ವೇಳೆ ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸಿ ಎಂದರು-‘ನೀಲಕಂಠ’ ನಟಿ ನಮಿತಾ

ನಾನು ಇಂಡಿಪೆಂಡೆಂಟ್ ಹುಡುಗಿ ಸ್ವಾಭಿಮಾನಿ. ಇಲ್ಲಿಯವರೆಗೂ ನನ್ನ ಜೀವನದಲ್ಲಿ ಎಲ್ಲವನ್ನೂ ನಾನೇ ಮಾಡಿಕೊಂಡಿದ್ದೇನೆ. ಹಾಗಾಗಿ ಸಂಗಾತಿಯ ಮುಂದೆ ನಾನು ದುರ್ಬಲವಾಗಿ ಕಾಣಲು ಇಷ್ಟಪಡುವುದಿಲ್ಲ ಎಂದು ಉರ್ಫಿ ಜಾವೇದ್ ಕಾರಣ ತಿಳಿಸಿದ್ದಾರೆ. ಈಗ ನಟಿಯ ಹೇಳಿಕೆಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಅಂದಹಾಗೆ, 2017ರಿಂದ 2022ರವರೆಗೆ ಪರಾಸ್ ಕಲ್ನಾವತ್ ಜೊತೆ ಉರ್ಫಿ ಡೇಟ್ ಮಾಡಿದರು. ಕೆಲ ಮನಸ್ತಾಪಗಳಿಂದ 2022ರಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡರು.

Share This Article