ಸೊಂಟ ಕಾಣಿಸುವಂತೆ ಹಸಿರು ಸೀರೆಯುಟ್ಟು ಬಂದ ಉರ್ಫಿ – ಒಳಉಡುಪು ಎಲ್ಲಿ ಹೋಯ್ತು ಅಂದ ನೆಟ್ಟಿಗರು

By
1 Min Read

ತನ್ನ ಭಿನ್ನ ಫ್ಯಾಷನ್‌ ಉಡುಗೆಗಳಿಂದಲೇ ವೈರಲ್‌ ಆಗುತ್ತಿರುವ ಬಾಲಿವುಡ್‌ ನಟಿ ಕಮ್‌ ಬಿಗ್‌ಬಾಸ್‌ ಮಾಜಿ ತಾರೆ ಉರ್ಫಿ ಜಾವೇದ್‌ (Uorfi Javed) ಇತ್ತೀಚೆಗೆ ಧರಿಸಿದ ಹಸಿರು ಸೀರೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದೆ.

 

View this post on Instagram

 

A post shared by Instant Bollywood (@instantbollywood)

ಹೌದು. ಉರ್ಫಿ ಫ್ಯಾಷನ್ ಸೆನ್ಸ್ ಊಹೆಗೂ ನಿಲುಕದ್ದು. ಪ್ರತಿ ಬಾರಿ ಒಂದೊಂದು ಅವತಾರದಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲೂ ಉರ್ಫಿ ಜಾವೇದ್ ಫ್ಯಾಷನ್ ಸೆನ್ಸ್‌ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಏಕೆಂದ್ರೆ ಪ್ರತಿ ಬಾರಿಯೂ ಉರ್ಫಿ ಬೋಲ್ಡ್ ಹಾಗೂ ಮಾದಕ ಲುಕ್‌ನಲ್ಲಿ ಕಾಣಿಸಿಕೊಂಡು ಕಣ್ಣು ಕುಕ್ಕಿದ್ದಾರೆ.

ಅದೇ ರೀತಿ ಈ ಬಾರಿ ಉರ್ಫಿ ಮೈತುಂಬಾ ಸೀರೆಯುಟ್ಟ (Saree Goals) ಅವತರಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಅದರಲ್ಲೂ ಕೊಂಕು ಕಂಡ ನೆಟ್ಟಿಗರು ಒಳಉಡುಪು ಎಲ್ಲಿ ಹೋಯ್ತಮ್ಮಾ? ಇನ್ನೂ ಈ ಕಣ್ಣಲ್ಲಿ ಅದೇನು ನೋಡ್ಬೇಕೋ ಅಂತಾ ಕೆಣಕಿದ್ದಾರೆ.

ಉರ್ಫಿ ವಿಡಿಯೋ ವೈರಲ್‌:
ಇನ್‌ಸ್ಟಾಂಟ್‌ ಬಾಲಿವುಡ್‌ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಉರ್ಫಿ ಜಾವೇದ್‌ ಸೀರೆ ಉಟ್ಟುಕೊಂಡು ಕಾರ್ಯಕ್ರಮವೊಂದಕ್ಕೆ ಆಗಮಿಸುವ ದೃಶ್ಯವಿದೆ. ಅಚ್ಚರಿಯೆಂದರೆ ಸೊಂಟ, ತೊಡೆ ತುಸು ಕಾಣಿಸುವಂತೆ ಸೀರೆ ಧರಿಸಿದ್ದಾರೆ. ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಕೆಲವರು ಒಳುಉಡುಪಿ ಎಲ್ಲಿ ಹೋಯ್ತು? ಅಂತ ನೆಗೆಟಿವ್‌ ಕಾಮೆಂಟ್‌ ಹಾಕಿದ್ರೆ ಇನ್ನೂ ಕೆಲವರು ಲುಕಿಂಗ್‌ ಲೈಕ್‌ ಎ ವಾವ್‌ ಅಂತಾ ಕಾಮೆಂಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ವೈರಲ್‌ ಆಗಲು ಇಷ್ಟೊಂದು ಅಶ್ಲೀಲ ಪ್ರದರ್ಶನ ಅಗತ್ಯವಿತ್ತೇ ಅಂತಾ ಪ್ರಶ್ನೆ ಮಾಡಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಈ ವೀಡಿಯೋ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

Share This Article