Stree 3: ರಶ್ಮಿಕಾ ಮಂದಣ್ಣಗೆ ವಿಲನ್ ಆದ ಅಕ್ಷಯ್ ಕುಮಾರ್

Public TV
1 Min Read

ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ (Stree 2) ಸಿನಿಮಾದ ಗೆಲುವು ಬಾಲಿವುಡ್‌ಗೆ ಮರುಜೀವ ಸಿಕ್ಕಂತೆ ಆಗಿದೆ. ‘ಸ್ತ್ರೀ 1’ ಮತ್ತು ‘ಸ್ತ್ರೀ 2’ರ ಸಕ್ಸಸ್ ನಂತರ ಪಾರ್ಟ್ 3 (Stree 3) ಬರುವ ಬಗ್ಗೆ ಕೂಡ ಅಧಿಕೃತ ಘೋಷಣೆಯಾಗಿದೆ. ಆದರೆ ಮುಂಬರುವ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದು, ಅಕ್ಷಯ್ ಕುಮಾರ್ (Akshay Kumar) ವಿಲನ್ ಆಗಿ ಅಬ್ಬರಿಸಲಿದ್ದಾರೆ.

‘ಸ್ತ್ರೀ 2’ ಸಿನಿಮಾಗಿಂತ ಪಾರ್ಟ್ 3 ಇನ್ನೂ ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ. ಮುಂದುವರೆದ ಸೀಕ್ವೆಲ್‌ನಲ್ಲಿ ರಶ್ಮಿಕಾ (Rashmika Mandanna) ಜೊತೆ ತಮನ್ನಾ ಭಾಟಿಯಾ (Tamannaah Bhatia), ಆಯುಷ್ಮಾನ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ವಿಶೇಷ ಏನಪ್ಪಾ ಅಂದರೆ, ಈ ಚಿತ್ರದಲ್ಲಿ ಸ್ಟಾರ್ ನಟ ಅಕ್ಷಯ್ ಕುಮಾರ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಉತ್ತಮ ಪಾತ್ರವೇ ಸಿಕ್ಕಿದೆ. ನಟನೆಗೆ ಸ್ಕೋಪ್ ಇರುವಂತ ಪಾತ್ರವನ್ನೇ ನಟಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಚಿತ್ರಮಂದರಕ್ಕೆ ಲಗ್ಗೆ ಇಡಲಿದೆ. ಇದನ್ನೂ ಓದಿ:ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ಕಿರಣ್ ಅಬ್ಬಾವರಂ ಡೆಸ್ಟಿನೇಷನ್ ವೆಡ್ಡಿಂಗ್

ಇನ್ನೂ ಪುಷ್ಪ, ಅನಿಮಲ್ (Animal) ಸಿನಿಮಾದ ಸಕ್ಸಸ್ ನಂತರ ರಶ್ಮಿಕಾ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಹಲವು ಬಿಗ್ ಬಜೆಟ್ ಸಿನಿಮಾಗಳ ಆಫರ್ ಅರಸಿ ಬರುತ್ತಿದೆ. ‘ಛಾವಾ’ ಮತ್ತು ‘ಪುಷ್ಪ 2’ (Pushpa 2) ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಅನಿಮಲ್ 2, ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಸಿಖಂದರ್ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ.

Share This Article