ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ಕಿರಣ್ ಅಬ್ಬಾವರಂ ಡೆಸ್ಟಿನೇಷನ್ ವೆಡ್ಡಿಂಗ್

By
1 Min Read

ಟಾಲಿವುಡ್ ನಟ ಕಿರಣ್ ಅಬ್ಬಾವರಂ (Kiran Abbavaram) ಅವರು ನಟಿ ರಹಸ್ಯ ಗೋರಕ್ (Rahasya Gorak) ಜೊತೆ ಆ.22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವೈವಾಹಿಕ ಬದುಕಿಗೆ ತೆಲುಗು ನಟಿ-ನಟಿಯರು, ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯ ಮುದ್ರೆ ಒತ್ತಿದ್ದಾರೆ. ತೆಲುಗಿನ ಈ ಜೋಡಿಯ ಇಷ್ಟದಂತೆ ಕೊಡಗಿನಲ್ಲಿ ಅದ್ಧೂರಿಯಾಗಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿದೆ. ಈ ಮದುವೆಯಲ್ಲಿ (Wedding) ಕುಟುಂಬಸ್ಥರು, ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

ಕಿರಣ್ ಸಿಲ್ಕ್ ಪಂಟೆ ಮತ್ತು ಶರ್ಟ್ ಧರಿಸಿದ್ರೆ, ನಟಿ ರಹಸ್ಯ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ಈ ಜೋಡಿಗೆ ಅನೇಕರು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ತೆಲುಗು ನಟಿ ಮೇಘಾ ಆಕಾಶ್‌ ನಿಶ್ಚಿತಾರ್ಥ

ಕಿರಣ್ ಅಬ್ಬಾವರಂ ನಟನೆಯ ಮೊದಲ ಸಿನಿಮಾ ‘ರಾಜ ವರು ರಾಣಿ ಗಾರು’ ನಾಯಕಿ ಈ ರಹಸ್ಯ ಗೋರಕ್. ಹಲವು ವರ್ಷಗಳ ಡೇಟಿಂಗ್ ಬಳಿಕ ತಮ್ಮ ಕುಟುಂಬಸ್ಥರಿಗೆ ಪ್ರೀತಿಯ ವಿಚಾರ ತಿಳಿಸಿ ಮಾರ್ಚ್ 13ರಂದು ಹೈದರಾಬಾದ್ ನಿಶ್ಚಿತಾರ್ಥ ಮಾಡಿಕೊಂಡರು.

ಅಂದಹಾಗೆ, ನಟ ಕಿರಣ್ ಅಬ್ಬಾವರಂಗೆ ಈಗ 31 ವರ್ಷ ವಯಸ್ಸು. ಯೂಟ್ಯೂಬ್‌ನಲ್ಲಿ ಶಾರ್ಟ್ ಫಿಲ್ಮ್ಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಕಿರಣ್, ‘ರಾಜಾ ವಾರು ರಾಣಿ ಗಾರು’ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಎಂಟ್ರಿ ಕೊಟ್ಟರು. ಅವರ ನಟನೆಗೆ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಅವರಿಗೆ ಸಿಕ್ಕವು. ‘ಎಸ್‌ಆರ್ ಕಲ್ಯಾಣಮಂಟಪಂ’, ‘ಸೆಬಾಸ್ಟಿನ್ ಪಿ ಸಿ 524’, ‘ಸಮ್ಮಾಥಮೆ’, ‘ನೇನು ಮೀಕು ಬಾಗ ಕಾವಲ್ಸಿನವಾಡಿನಿ’, ‘ವಿನರೋ ಭಾಗ್ಯಮು ವಿಷ್ಣು ಕಥಾ’, ‘ರೂಲ್ಸ್ ರಂಜನ್’, ‘ಮೀಟರ್’ ಸಿನಿಮಾಗಳಲ್ಲಿ ಕಿರಣ್ ನಟಿಸಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕೇ ವರ್ಷಗಳಲ್ಲಿ ಅವರ 8 ಸಿನಿಮಾ ರಿಲೀಸ್ ಆಗಿರುವುದು ಕಿರಣ್‌ಗೆ ಇರುವ ಜನಪ್ರಿಯತೆಗೆ ಸಾಕ್ಷಿ. ಸದ್ಯ ‘ದಿಲ್ ರೂಬಾ’ ಅನ್ನೋ ಸಿನಿಮಾದಲ್ಲಿ ಕಿರಣ್ ಬಣ್ಣ ಹಚ್ಚಿದ್ದಾರೆ.

Share This Article