ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ‘ಜಿಂಗೋ’ ಆದ ಡಾಲಿ

Public TV
1 Min Read

ಟರಾಕ್ಷಸ ಡಾಲಿ (Daali Dhananjay) ಇಂದು (ಆ.23) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಡಾಲಿ ನಟಿಸಲಿರುವ ಮುಂಬರುವ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ‘ಜಿಂಗೋ’ (Jingo Film) ಆಗಿ ಡಾಲಿ ಕಾಣಿಸಿಕೊಳ್ತಿದ್ದಾರೆ.

ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ನಟರಾಕ್ಷಸ ಡಾಲಿ ಈಗ ‘ಡೇರ್ ಡೆವಿಲ್ ಮುಸ್ತಾಫಾ’ ಖ್ಯಾತಿಯ ನಿರ್ದೇಶಕ ಶಶಾಂಕ್ ಸೋಗಾಲ್ ಕೈಜೋಡಿಸಿದ್ದಾರೆ. ಮರ್ಡರ್ ಮಿಸ್ಟ್ರಿ ಚಿತ್ರದಲ್ಲಿ ಡಾಲಿ ಹೀರೋ ಕಂ ಆ್ಯಂಟಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.‌ ಇದನ್ನೂ ಓದಿ:`ಸೌಂಡ್ ಆಫ್ ಯುಐ’ ಉಪ್ಪಿಯ ಹಾಡಿನ ಹಬ್ಬ ಶುರು

 

View this post on Instagram

 

A post shared by Daali Pictures (@daalipictures)

ಇದೊಂದು ಇನ್‌ವೆಸ್ಟಿಗೇಟಿವ್ ಡ್ರಾಮಾ. ಒಂದು ಕಾಲ್ಪನಿಕ ಹಳ್ಳಿಯ ಮುಖಂಡನೇ ‘ಜಿಂಗೋ’. ಆ ಹಳ್ಳಿಯಲ್ಲಿ ಮರ್ಡರ್ ಆಗುತ್ತೆ. ಅದರ ಹಿನ್ನೆಲೆಯಲ್ಲಿ ಕಥೆ ಮುಂದೆ ಹೋಗುತ್ತದೆ ಎಂಬುದು ಚಿತ್ರದ ಒನ್ ಲೈನ್ ಕಥೆಯಾಗಿದೆ. ಈ ಹಿಂದೆ ಎಂದೂ ನಟಿಸಿರದ ವಿಭಿನ್ನ ಗೆಟಪ್‌ನಲ್ಲಿ ಧನಂಜಯ ಕಾಣಿಸಿಕೊಳ್ತಿರೋದು ಚಿತ್ರದ ವಿಶೇಷ.

ಇನ್ನೂ ಈ ಚಿತ್ರವನ್ನು ನರೇಂದ್ರ ರೆಡ್ಡಿ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸ್ಕ್ರೀಪ್ಟ್ ಕೆಲಸ ಮುಗಿದು, ಪಾತ್ರಗಳ ಆಯ್ಕೆ ನಡೆಯುತ್ತಿದ್ದು, ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ.

Share This Article