ಶಾರುಖ್, ಸಲ್ಮಾನ್, ಆಮೀರ್ ಖಾನ್ ಜೊತೆ ನಟಿಸದಿರಲು ಕಾರಣ ಬಿಚ್ಚಿಟ್ಟ ಶ್ರದ್ಧಾ ಕಪೂರ್

Public TV
1 Min Read

‘ಆಶಿಕಿ 2′ ಬೆಡಗಿ ಶ್ರದ್ಧಾ ಕಪೂರ್ (Shraddha Kapoor) ಸದ್ಯ ‘ಸ್ತ್ರೀ 2’ (Stree 2)  ಸಿನಿಮಾದ ಯಶಸ್ಸಿನ ನಂತರ ಬೇಡಿಕೆಯ ನಟಿಯಾಗಿದ್ದಾರೆ. ಸಕ್ಸಸ್ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್, ಸಲ್ಮಾನ್, ಆಮೀರ್ ಖಾನ್ ಜೊತೆ ಯಾಕೆ ನಟಿಸಿಲ್ಲ ಎಂದು ನಟಿ ಮಾತನಾಡಿದ್ದಾರೆ. ಸ್ಟಾರ್‌ ಹೀರೋ ಎಂಬುದಕ್ಕಿಂತ ನನ್ನ ಪಾತ್ರದ ಪಾಮುಖ್ಯತೆ ಮುಖ್ಯ ಎಂದು ಶ್ರದ್ಧಾ ಮಾತನಾಡಿದ್ದಾರೆ. ಇದನ್ನೂ ಓದಿ:1 ಸೆಕೆಂಡ್ ರೀಲ್ಸ್‌ ಮಾಡಿದ ದೀಪಿಕಾ ಪಡುಕೋಣೆ ಫುಲ್‌ ಟ್ರೆಂಡಿಂಗ್

ಸೂಪರ್ ಸ್ಟಾರ್‌ಗಳ ಸಿನಿಮಾ ಎಂಬುದಕ್ಕಿಂತ ತಮಗೆ ಸಿಕ್ಕ ಪಾತ್ರಕ್ಕೆ ಅದೆಷ್ಟು ಪ್ರಾಮುಖ್ಯತೆ ಇದೆ ಎಂಬುದು ನನಗೆ ಮುಖ್ಯವಾಗುತ್ತದೆ ಎಂದಿದ್ದಾರೆ ಶ್ರದ್ಧಾ. ಈ ಹಿಂದೆ ಅವಕಾಶಗಳು ಬಂದಾಗ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಎಂದು ತಿಳಿದು ರಿಜೆಕ್ಟ್ ಮಾಡಿರೋದಾಗಿ ತಿಳಿಸಿದ್ದಾರೆ. ಶಾರುಖ್, ಸಲ್ಮಾನ್ (Salman Khan) ಮತ್ತು ಆಮೀರ್ ಖಾನ್ (Aamir Khan) ಜೊತೆ ನಟಿಸುವ ಆಫರ್ ಸಿಕ್ಕರೂ ಕೂಡ ಆಕ್ಟ್ ಮಾಡದಿರಲು ಇದೇ ಕಾರಣ ಎಂದು ಶ್ರದ್ಧಾ ಕಪೂರ್ ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ.

ಅವಕಾಶಗಳು ಸಿಕ್ಕಾಗ, ಮಾಡಿದರೆ ಈ ರೀತಿಯ ಪಾತ್ರ ಮಾಡಬೇಕು ಎಂದೆನಿಸಬೇಕು. ನಮ್ಮೊಳಗಿನ ಕಲಾವಿದೆಗೆ ಚಾಲೆಂಜಿಂಗ್ ಎಂದು ಎನಿಸಲಿಲ್ಲ ಎಂದರೆ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಯಾವಾಗಲೂ ಉತ್ತಮ ಕಥೆ ಮತ್ತು ಅದ್ಭುತ ತಂಡದ ಭಾಗವಾಗಲು ಇಷ್ಟಪಡುತ್ತೇನೆ. ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಲು ಎದುರು ನೋಡ್ತಿದ್ದೇನೆ. ಕಥೆ ಆಯ್ಕೆಯಲ್ಲೂ ಕಾಳಜಿ ವಹಿಸುತ್ತೇನೆ ಎಂದು ಶ್ರದ್ಧಾ ಮಾತನಾಡಿದ್ದಾರೆ.

ಅಂದಹಾಗೆ, ಆ.15ರಂದು ಬಿಡುಗಡೆಯಾದ ‘ಸ್ತ್ರೀ’ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ದಕ್ಷಿಣ ಸಿನಿಮಾಗಳೇ ಸದ್ದು ಮಾಡುತ್ತಿರುವಾಗ ಈ ಚಿತ್ರದ ಸಕ್ಸಸ್‌ನಿಂದ ಬಾಲಿವುಡ್‌ಗೆ ಮರು ಜೀವ ಸಿಕ್ಕಂತೆ ಆಗಿದೆ.

Share This Article