Kantara Chapter 1: ಕಳರಿಪಯಟ್ಟು ಕಲಿಕೆಯ ಫೋಟೋ ಹಂಚಿಕೊಂಡ ರಿಷಬ್‌ ಶೆಟ್ಟಿ

By
1 Min Read

ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ ಚಾಪ್ಟರ್ 1’ರ Kantara Chapter 1) ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಸಿನಿಮಾದಲ್ಲಿ ಕಳರಿಪಯಟ್ಟು (Kalaripayattu) ಕಲಿಯುತ್ತಿರುವ ಲುಕ್‌ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ರಿಷಬ್‌ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ರಿಷಬ್ ಕಳರಿಪಯಟ್ಟು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಪಾತ್ರಕ್ಕಾಗಿ ಸಕಲ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿತ್ತು. ಈಗ ಚಿತ್ರದಲ್ಲಿನ ಕಳರಿಪಯಟ್ಟು ಕಲಿಕೆಯಲ್ಲಿ ನಿರತರಾಗಿರುವ ಲುಕ್ ಅನಾವರಣ ಆಗಿದೆ. ಇದರಿಂದ ಅಭಿಮಾನಿಗಳಿಗೆ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

ಅಂದಹಾಗೆ, ಕಾಂತಾರ 1 ಸಿನಿಮಾವು ಆಗಸ್ಟ್ ಕೊನೆಯ ವಾರದಲ್ಲಿ 4ನೇ ಹಂತದ ಚಿತ್ರೀಕರಣ ನಡೆಯಲಿದ್ದು, ಕಂಪ್ಲಿಟ್ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯಗಳು ಶೂಟ್ ಮಾಡಲಾಗುತ್ತದೆ. ಚಿತ್ರವು ಪೂರ್ಣಗೊಳ್ಳುವ ಹಂತದಲ್ಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿವೆ. ಇದನ್ನೂ ಓದಿ:ಊರ್ವಶಿ ರೌಟೇಲಾ ಬೆರಳಿಗೆ ಗಾಯ- ಕಾಮೆಂಟ್ ಮಾಡಿ ನಗ್ತಿರೋದ್ಯಾಕೆ ನೆಟ್ಟಿಗರು?

‘ಕಾಂತಾರ ಚಾಪ್ಟರ್ 1’ ಸಿನಿಮಾ ಕಾಂತಾರದ ಹಿಂದಿನ ಕತೆಯಾಗಿದೆ. ಕದಂಬ ಯುಗದ ಪಂಜುರ್ಲಿ ದೇವತೆಯ ಕಥೆಯನ್ನು ಇದು ಹೊಂದಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಬಹುನಿರೀಕ್ಷಿತ ಚಿತ್ರವು 2025ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದೆ.

Share This Article