ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

Public TV
1 Min Read

ಕ್ಷಯ್ ಕುಮಾರ್‌ಗೆ (Akshay Kumar) ಅದೃಷ್ಟ ಕೈಹಿಡಿಯುತ್ತಿಲ್ಲ. ನಟಿಸಿದ ಸಿನಿಮಾಗಳೆಲ್ಲವೂ ಚಿತ್ರಮಂದಿರದಲ್ಲಿ ಮಕಾಡೆ ಮಲಗುತ್ತಿದೆ. ಆ.15ರಂದು ರಿಲೀಸ್ ಆಗಿದ್ದ ‘ಖೇಲ್ ಖೇಲ್ ಮೇ’ ಸಿನಿಮಾವು 15 ಕೋಟಿ ರೂ. ಗಳಿಸಲು ಕೂಡ ಒದ್ದಾಡುತ್ತಿದೆ. ಇದನ್ನೂ ಓದಿ:ರಕುಲ್ ದಾಂಪತ್ಯ ಮುರಿದು ಬೀಳಲಿದೆ- ಭವಿಷ್ಯ ನುಡಿದ ಸೆಲೆಬ್ರಿಟಿ ಜ್ಯೋತಿಷಿ

ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ (Shraddha Kapoor) ನಟನೆಯ ಸ್ತ್ರೀ 2 200 ಕೋಟಿ ರೂ. ಕಲೆಕ್ಷನ್ ಮಾಡುತ್ತ ದಾಪುಗಾಲಿಡುತ್ತಿದೆ. ಆದರೆ ಈ ಚಿತ್ರದ ಮುಂದೆ ‘ಖೇಲ್ ಖೇಲ್ ಮೇ’ (Khel Khel Mein) ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ. 50ರಿಂದ 60 ಕೋಟಿ ರೂ. ಸಂಭಾವನೆ ಪಡೆಯುವ ಅಕ್ಷಯ್ ನಟಿಸಿದ ಚಿತ್ರ 15 ಕೋಟಿ ಕೂಡ ಕಲೆಕ್ಷನ್ ಮಾಡದೇ ಇರೋದು ಬೇಸರದ ಸಂಗತಿ.

ಈ ವರ್ಷ ಅಕ್ಷಯ್ ಕುಮಾರ್ ನಟಿಸಿದ್ದ ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’ ಸಿನಿಮಾಗಳು ಸೋತಿವೆ. ಇದನ್ನೂ ಓದಿ:ಪೊಲೀಸ್ ಅಧಿಕಾರಿಯಾಗಿ ತಲೈವಾ- ಅ.10ಕ್ಕೆ ‘ವೆಟ್ಟೈಯಾನ್’ ರಿಲೀಸ್‌ಗೆ ರೆಡಿ

ಇನ್ನೂ ಸಕ್ಸಸ್ ಸಿಗದೆ ಕಂಗಾಲಾಗಿರುವ ಅಕ್ಷಯ್ ಕುಮಾರ್ ಅವರು ಸೌತ್‌ನತ್ತ ಮುಖ ಮಾಡಿದ್ದಾರೆ. ‘ಕಣ್ಣಪ್ಪ’ ಸಿನಿಮಾದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ.

Share This Article