12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ

Public TV
1 Min Read

– ಆ.14ರಂದು 9.17 ಲಕ್ಷ ಪ್ರಯಾಣಿಕರ ಸಂಚಾರ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಓಡಾಟದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಲಾಲ್‌ಬಾಗ್ ಫ್ಲವರ್ ಶೋ (Lalbagh Flower Show) ಹಾಗೂ ಲಾಂಗ್ ವೀಕೆಂಡ್ ರಜೆ ಹಿನ್ನೆಲೆ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಭಾರೀ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣ ತಲುಪಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ನಮ್ಮ ಮೆಟ್ರೋ, ಆಗಸ್ಟ್ 14 ರಂದು ಒಂದೇ ದಿನ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಬರೋಬ್ಬರಿ 9.17 ಲಕ್ಷ ಮಂದಿ ಸಂಚಾರ ನಡೆಸಿದ್ದಾರೆ. ಇದು ಈವರೆಗಿನ ಅತೀ ಹೆಚ್ಚು ಪ್ರಯಾಣಿಕರು ಓಡಾಟ ಮಾಡಿದ ಸಂಖ್ಯೆಯಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್‌

ಇತ್ತೀಚೆಗೆ ಆಗಸ್ಟ್ 06 ರಂದು ನಮ್ಮ ಮೆಟ್ರೋದಲ್ಲಿ ಒಂದೇ ದಿನ ಬರೋಬ್ಬರಿ 8.26 ಲಕ್ಷ ಮಂದಿ ಸಂಚರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ ಒಂದೇ ವಾರದಲ್ಲಿ ಆ ದಾಖಲೆ ಅಳಿದಿದ್ದು, ಇದು ಮೆಟ್ರೋ ಆರಂಭವಾದ ಕಳೆದ ಸುಮಾರು 12 ವರ್ಷಗಳ ಸಾರ್ವಕಾಲಿಕ ದಾಖಲೆ ಆಗಿದೆ ಎಂದು ನಮ್ಮ ಮೆಟ್ರೋ ಹೇಳಿದೆ.  ಇದನ್ನೂ ಓದಿ: ಆನೇಕಲ್‍ನಲ್ಲಿ ವಿದ್ಯುತ್ ಶಾಕ್‍ಗೆ ಯುವ ಇಂಜಿನಿಯರ್ ಬಲಿ

Share This Article