‘ಮಿಸ್ಟರ್ ಅಂಡ್ ಮಿಸಸ್ ರಾಜಾ ಹುಲಿ’ ಪೋಸ್ಟರ್ ರಿಲೀಸ್ ಮಾಡಿದ ವೀರೇಂದ್ರ ಹೆಗ್ಗಡೆ

Public TV
1 Min Read

ಹೊನ್ನರಾಜ್ ನಿರ್ದೇಶನದ ‘ಮಿಸ್ಟರ್ ಅಂಡ್ ಮಿಸಸ್’ (Mr. and Mrs. Raja Huli) ರಾಜಾಹುಲಿ  ಚಿತ್ರವೀಗ ಸಿದ್ದವಾಗಿದೆ‌.   ಹೊನ್ನರಾಜ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಜೊತೆಗೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ  ನಿರ್ಮಾಣವನ್ನೂ ಮಾಡಿದ್ದಾರೆ. ಈ ಚಿತ್ರದ ನೂತನ ಪೋಸ್ಟರನ್ನು  ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಧರ್ಮಸ್ಥಳದಲ್ಲಿ  ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ  ನಾಯಕ ಹೊನ್ನರಾಜ್, ರಾಜೇಂದ್ರ, ನಂದಿಹಳ್ಳಿ ಶಿವಣ್ಣ, ಜಗದೀಶ್ , ಸಹನಿರ್ದೇಶಕ ಪ್ರಕಾಶ್ ವೆಂಕಟರಮಣ, ಸ್ಟಿಲ್ ವೆಂಕಟೇಶ್, ಮೋಹನ್, ಜಗನ್ನಾಥ್  ಇತರರಿದ್ದರು. ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಿತ್ರ ಇದಾಗಿದೆ. ಇಲ್ಲಿ ನಾಯಕ  ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು‌,  ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ನಾಯಕ  ಮದುವೆ ಆಗ್ತಾನೋ ಇಲ್ಲವೋ, ಎನ್ನುವುದೇ ಚಿತ್ರದ ಕಥಾಹಂದರ.

 

ಈ ಚಿತ್ರಕ್ಕೆ ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಶ್ರೀನಿವಾಸ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ಅವರ  ನೃತ್ಯ ನಿರ್ದೇಶನ‌ಈ ಚಿತ್ರಕ್ಕಿದೆ. ಮೈಸೂರು ಮಂಜುಳ , ರೇಖಾದಾಸ್ ಮತ್ತಿತರರು ಈ ಚಿತ್ರದಲ್ಲಿದ್ದಾರೆ.

Share This Article