ಪವಿತ್ರಾಗೌಡ ಚಪ್ಪಲಿಯಲ್ಲೂ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಆರೋಪಿ ಪವಿತ್ರಾಗೌಡಗೆ (Pavithra Gowda) ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿಯ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ.

ಪವಿತ್ರಾಗೌಡ ಮನೆಯಲ್ಲಿ ಕೊಲೆ ದಿನ ಆಕೆ ಧರಿಸಿದ್ದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್ ಅಳವಡಿಕೆಗೆ ಮಳೆ ಭೀತಿ

ಪವಿತ್ರಾಗೌಡ ವಿರುದ್ಧ ಈ ಚಪ್ಪಲಿ ಪ್ರಬಲ ಸಾಕ್ಷಿಯಾಗಲಿದೆ. ಪಟ್ಟಣಗೆರೆ ಶೆಡ್‌ಗೆ ಹೋಗಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಆರೋಪ ನಟಿ ಮೇಲಿತ್ತು. ಈಗ ಅದೇ ಚಪ್ಪಲಿ ಮೇಲೆ ಕೊಲೆಯಾದ ವ್ಯಕ್ತಿಯ ರಕ್ತದ ಕಲೆ ಇರುವುದು ತಿಳಿದುಬಂದಿದೆ.

ಇನ್ನು, ಕೊಲೆ ಪ್ರಕರಣ ಸಂಬಂಧ ದರ್ಶನ್‌ ಆಪ್ತ ಬಳಗದ ಮತ್ತೊಬ್ಬ ನಟನ ಸಾಕ್ಷಿ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164ರಡಿ ಪೊಲೀಸರು ದಾಖಲಿಸಿದ್ದಾರೆ. ಹತ್ಯೆಗೂ ಮುನ್ನ ದರ್ಶನ್‌ ಜೊತೆ ಭೋಜನ ಕೂಟದಲ್ಲಿದ್ದ ಕಾರಣಕ್ಕೆ ನಟ ಯಶಸ್‌ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಇದನ್ನೂ ಓದಿ: ವಾಹನ‌ ಸವಾರರೇ ಎಚ್ಚರ – ಚಾರ್ಮಾಡಿ ಘಾಟಿಯಲ್ಲಿ ಬಾಯ್ತೆರೆದು ಕೂತಿವೆ ಬಂಡೆಕಲ್ಲು

Share This Article