ಯಶ್ ಸಿನಿಮಾಗಾಗಿ ಬೆಂಗಳೂರಿಗೆ ಬಂದಿಳಿದ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ

Public TV
1 Min Read

ಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾಗೆ ಆ.8ರಂದು ಸರಳವಾಗಿ ಮುಹೂರ್ತ ಕಾರ್ಯಕ್ರಮ ಜರುಗಿದೆ. ಈ ಬೆನ್ನಲ್ಲೇ ರಾಕಿ ಬಾಯ್ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಕ್ಕಿದೆ. ಯಶ್ ಚಿತ್ರಕ್ಕಾಗಿ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಕಥೆಯಾಗಿರಲಿ, ಕ್ವಾಲಿಟಿ ಆಗಿರಲಿ ಎಲ್ಲೂ ರಾಜಿಯಾಗಬಾರದು ಎಂದು ‘ಟಾಕ್ಸಿಕ್’ ಚಿತ್ರಕ್ಕಾಗಿ ಖ್ಯಾತ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪರ್ರಿ ಅವರನ್ನು ಬೆಂಗಳೂರಿಗೆ ಕರೆಸಿದ್ದಾರೆ ಯಶ್. ಈ ಸಿನಿಮಾದಲ್ಲಿ ಆ್ಯಕ್ಷನ್ ಎಲಿಮೆಂಟ್‌ಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಜೆಜೆ ಪೆರ್ರಿ ಕೊರಿಯೋಗ್ರಾಫಿಯಲ್ಲಿ ಯಶ್ ಅವರ ಆ್ಯಕ್ಷನ್ ಸೀಕ್ವೆನ್ಸ್ ಮೂಡಿ ಬರಲಿದೆ. ಇದನ್ನೂ ಓದಿ:ಸಮಂತಾ ಪ್ರಪೋಸ್ ಮಾಡಿದ ದಿನಾಂಕದಂದೇ ಶೋಭಿತಾಗೆ ರಿಂಗ್ ತೊಡಿಸಿದ ನಾಗಚೈತನ್ಯ

ಹಾಲಿವುಡ್ ನಟರುಗಳಿಗೆ ಸ್ಟಂಟ್ ಡಬಲ್ ಆಗಿ ಜೆಜೆ ಪೆರ್ರಿ ಕೆಲಸ ಮಾಡಿದ್ದಾರೆ. 80ರ ದಶಕದ ಸಿನಿಮಾಗಳಲ್ಲಿ ಸ್ಟಂಟ್ ಡಬಲ್ ಆಗಿ, ಸ್ಟಂಟ್ ಮ್ಯಾನ್ ಆಗಿ ಜೆಜೆ ಪೆರ್ರಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕಟ್ಟುಮಸ್ತಾದ ದೇಹ, ಸ್ಟಂಟ್ ಮಾಡುವ ಪ್ರತಿಭೆಯಿಂದಾಗಿ ಹಲವು ಭಾಷೆಗಳಲ್ಲಿ ಅವರಿಗೆ ಬೇಡಿಕೆ ಇದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೆಜಿಎಫ್ 1, ಕೆಜಿಎಫ್ 2 ಸಿನಿಮಾದ ಸಕ್ಸಸ್ ಸಿಕ್ಕಿದ್ಮೇಲೆ ಪರಭಾಷೆಗೆ ಹೋಗ್ತೀರಾ ಎಂದು ಯಶ್‌ಗೆ ಪ್ರಶ್ನೆ ಎದುರಾಗುತ್ತಿತ್ತು. ನಾನು ಎಲ್ಲೂ ಹೋಗಲ್ಲ. ಬಾಲಿವುಡ್, ಹಾಲಿವುಡ್ ಅವರನ್ನು ಇಲ್ಲಿಗೆ ಕರೆಸುತ್ತೇನೆ ಎಂದು ಯಶ್ ಆಡಿದ ಮಾತನ್ನು ಮಾಡಿಯೇ ತೋರಿಸಿದ್ದಾರೆ.

Share This Article