ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಭಾರತ ಪುರುಷರ ಹಾಕಿ ತಂಡಕ್ಕೆ ಕಂಚು

Public TV
2 Min Read

ಪ್ಯಾರಿಸ್‌: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತಕ್ಕೆ (India) ಮತ್ತೊಂದು ಪದಕ ದಕ್ಕಿದೆ. ಭಾರತೀಯ ಪುರುಷರ ಹಾಕಿ (Hockey) ತಂಡವು ಕಂಚಿನ ಪದಕ ಗೆದ್ದು ಬೀಗಿದೆ.

2-1 ಗೋಲುಗಳಿಂದ ಸ್ಪೇನ್‌ (Spain) ಮಣಿಸಿದ ಭಾರತ ತಂಡವು ಕಂಚಿನ ಪದಕಕ್ಕೆ ಕೊರಳೊಡ್ಡಿದೆ. 2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಪುರುಷರ ಹಾಕಿ ತಂಡ ಕಂಚು ಗೆದ್ದಿತ್ತು. ಇದನ್ನೂ ಓದಿ: ವಿನೇಶ್‌ ಫೋಗಟ್‌ಗೆ 4 ಕೋಟಿ ರೂ. ಬಹುಮಾನ – ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲಿ ಗೌರವಿಸಲು ಸಕಲ ಸಿದ್ಧತೆ

ಜರ್ಮನ್‌ ವಿರುದ್ಧ ಸೆಮಿಫೈನಲ್‌ ತಲುಪಲು ವಿಫಲವಾಗಿ ಭಾರತ ತಂಡ ನಿರಾಸೆ ಅನುಭವಿಸಿತ್ತು. ಕಂಚಿನ ಹೋರಾಟದಲ್ಲಿ ಸ್ಪೇನ್‌ ವಿರುದ್ಧ 2-1 ಅಂತರ ಗೋಲುಗಳ ಜಯ ದಾಖಲಿಸಿದೆ. ಭಾರತದ ಪರ ತನ್ನ ಅಂತಿಮ ಪಂದ್ಯವನ್ನು ಆಡಿದ ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಉತ್ತಮ ಪ್ರದರ್ಶನ ತೋರಿದರು.

1968 ಮತ್ತು 1972 ರಲ್ಲಿ ಭಾರತವು ಕೊನೆಯ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಾಕಿ ಪದಕಗಳನ್ನು ಗೆದ್ದಿತ್ತು. ಅದಾದ 52 ವರ್ಷಗಳ ಬಳಿಕ ಈಗ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಪದಕ ಗೆದ್ದು ಇತಿಹಾಸ ಬರೆದಿದೆ. ಇದನ್ನೂ ಓದಿ: Paris Olympics | ವಿನೇಶ್‌ ಅನರ್ಹ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ – ಅಂತಿಮ್‌ ಪಂಘಲ್‌ ಗಡಿಪಾರು

ಸದ್ಯ ಇಲ್ಲಿವರೆಗೆ ಒಲಿಂಪಿಕ್ಸ್‌ನಲ್ಲಿ ಹಾಕಿ ಇತಿಹಾಸದಲ್ಲಿ 8 ಚಿನ್ನ, 1 ಬೆಳ್ಳಿ, 3 ಕಂಚು ಸೇರಿದಂತೆ 12 ಪದಕಗಳನ್ನು ಭಾರತದ ಹಾಕಿ ತಂಡ ಗೆದ್ದಿದೆ.

Share This Article