ನಾರಿಮಣಿಯರ ಮನಗೆದ್ದ ಹ್ಯಾಂಡ್‌ಲೂಮ್ ಸೀರೆ

Public TV
1 Min Read

ಹ್ಯಾಂಡ್‌ಲೂಮ್ ಸೀರೆಗಳತ್ತ (Handlooo Saree) ಯುವತಿಯರ ಒಲವು ಮೊದಲಿಗಿಂತ ಹೆಚ್ಚಾಗಿದೆ. ಹೌದು, ಇದುವರೆಗೂ ಒಂದು ವರ್ಗದ ಮಹಿಳೆಯರಿಗೆ ಹಾಗೂ ದೇಸಿ ಸೀರೆ ಪ್ರಿಯರಿಗೆ ಮಾತ್ರ ಸೀಮಿತವಾಗಿದ್ದ, ಹ್ಯಾಂಡ್‌ಲೂಮ್ ಸೀರೆಗಳು ಇದೀಗ ಈ ಜನರೇಷನ್‌ನ ಯುವತಿಯರನ್ನು ಸೆಳೆಯುತ್ತಿವೆ. ಇದನ್ನೂ ಓದಿ:ಡಾ.ರಾಜ್‌ಕುಮಾರ್ ನಟನೆಯ ‘ಗಂಧದಗುಡಿ’ ಚಿತ್ರ ಸ್ಮರಿಸಿದ ಪವನ್ ಕಲ್ಯಾಣ್

ಸಿಂಪಲ್ ಲುಕ್, ಪರಿಸರ ಸ್ನೇಹಿ ಹಾಗೂ ದೇಸಿ ಸೀರೆಗಳ ಪ್ರೇಮಿಗಳ ವಾಡ್ರೋðಬ್‌ನಲ್ಲಿ ಮಾತ್ರ ಸ್ಥಾನಗಳಿಸಿದ್ದ ಈ ಬಗೆಬಗೆಯ ಹ್ಯಾಂಡ್‌ಲೂಮ್ ಸೀರೆಗಳು ಇದೀಗ ನಿಧಾನಗತಿಯಲ್ಲಿ ಕಾರ್ಪೊರೇಟ್ ಕ್ಷೇತ್ರದ ಯುವತಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಪರಿಣಾಮ, ಸೀರೆಯು ಹ್ಯಾಂಡ್‌ಲೂಮ್‌ದ್ದಾದರೂ, ಇಂಡೋ-ವೆಸ್ಟರ್ನ್ ಡ್ರೇಪಿಂಗ್ ಸ್ಟೈಲ್ ಸೇರಿದಂತೆ ನಾನಾ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಸೀರೆಗಳನ್ನು ಹೀಗೂ ಸ್ಟೈಲಿಂಗ್‌ ಮಾಡಬಹುದು ಎಂಬುದನ್ನು ಸಾಬೀತುಪಡಿಸಿವೆ. ಜೊತೆಗೆ ದೇಸಿ ಪ್ಲಸ್ ವೆಸ್ಟರ್ನ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿವೆ.

ಹ್ಯಾಂಡ್‌ಲೂಮ್ ಸೀರೆಗಳು ಇತ್ತೀಚಿನ ದಿನಗಳಲ್ಲಿ ಹೊಸ ಸ್ಟೈಲಿಂಗ್‌ನಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಇಂಡೋ-ವೆಸ್ಟರ್ನ್ ಶೈಲಿಯ ಮಿಕ್ಸ್ ಮ್ಯಾಚ್ ಡ್ರೇಪಿಂಗ್‌ನಲ್ಲಿ ಪಾಪುಲರ್ ಆಗಿವೆ. ಅಲ್ಲದೇ, ಹುಡುಗಿಯರ ಪ್ರಯೋಗಾತ್ಮಕ ಸ್ಟೈಲಿಂಗ್‌ ಹೊಂದಿಕೊಂಡಿವೆ.

ಮೊದಲೆಲ್ಲಾ ಹ್ಯಾಂಡ್‌ಲೂಮ್ ಸೀರೆಗಳನ್ನು ಕೇವಲ ಮಹಿಳೆಯರು, ದೇಸಿ ಲುಕ್ ಬಯಸುವವರು ಹಾಗೂ ರಾಜಕೀಯ ಕ್ಷೇತ್ರದ ಮಹಿಳೆಯರು ಮಾತ್ರ ಉಡುತ್ತಿದ್ದರು. ಇದೀಗ ಯುವತಿಯರೂ ಉಡಲಾರಂಭಿಸಿದ್ದಾರೆ. ಹ್ಯಾಂಡ್‌ಲೂಮ್ ಸೀರೆಗಳ ಪ್ರದರ್ಶನಕ್ಕೆ ಸರ್ಕಾರ ಕೂಡ ಸಹಕಾರ ನೀಡುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಉಚಿತ ಸೌಲಭ್ಯಗಳನ್ನು ನೀಡಿ, ಅವುಗಳನ್ನು ನೇಯುವವರಿಗೆ ನೇರ ಮಾರುಕಟ್ಟೆ ಕಲ್ಪಿಸುವಲ್ಲಿ ನೆರವಾಗುತ್ತಿದೆ. ಇದಕ್ಕೆಂದೇ ಪ್ರತಿ ವರ್ಷ ಉದ್ಯಾನನಗರಿಯಲ್ಲಿ ಪ್ರದರ್ಶನ ಹಾಗೂ ಮಾರಾಟ ಮೇಳಗಳು ನಡೆಯುತ್ತವೆ.

ಮೊದಲೆಲ್ಲ ಕೇವಲ ಹ್ಯಾಂಡ್‌ಲೂಮ್ ಸೀರೆ ಖರೀದಿಸುವುದು ಸುಲಭವಾಗಿರಲಿಲ್ಲ. ಇದೀಗ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೇ ಸಾಕು, ಮನೆ ಬಾಗಿಲಿಗೆ ಇವು ತಲುಪುತ್ತವೆ. ಹಾಗಾಗಿ ಖರೀದಿಸಿ, ಉಡುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿದೆ.

Share This Article