ನಾನು ಭೂಮಿಯ ಮೇಲಿನ ಅದೃಷ್ಟ ವ್ಯಕ್ತಿ: ವಿಕ್ರಮ್ ಭೇಟಿಯಾದ ಡಿವೈನ್ ಸ್ಟಾರ್

Public TV
1 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ಕಾಲಿವುಡ್ (Kollywood) ಸ್ಟಾರ್ ನಟ ಚಿಯಾನ್ ವಿಕ್ರಮ್‌ರನ್ನು (Chiyaan Vikram) ಭೇಟಿಯಾಗಿದ್ದಾರೆ. 24 ವರ್ಷಗಳ ಕಾಯುವಿಕೆಯ ನಂತರ ವಿಕ್ರಮ್ ಅವರನ್ನು ಭೇಟಿಯಾದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ರಿಷಬ್ ಸಂಭ್ರಮಿಸಿದ್ದಾರೆ.

ನಟನಾಗುವಾಗ ನನ್ನ ಪ್ರಯಾಣದಲ್ಲಿ, ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿಯಾಗಿದ್ದರು. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಇಂದು ವಿಕ್ರಮ್ ಅವರನ್ನು ಭೇಟಿಯಾದೆ. ಹೀಗಾಗಿ ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ. ನನ್ನಂತಹ ನಟರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು, ‘ತಂಗಲಾನ್’ ಸಿನಿಮಾಗೆ ಶುಭ ಹಾರೈಸುತ್ತೇನೆ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

ಅಂದಹಾಗೆ, ವಿಕ್ರಮ್ ನಟನೆಯ ‘ತಂಗಲಾನ್’ (Thangalaan) ಚಿತ್ರ ಇದೇ ಆ.15ರಂದು ರಿಲೀಸ್‌ಗೆ ಸಿದ್ಧವಾಗಿದೆ. ಹಾಗಾಗಿ ಪ್ರಚಾರಕ್ಕಾಗಿ ಬೆಂಗಳೂರಿಗೆ ವಿಕ್ರಮ್ ಭೇಟಿ ನೀಡಿದ್ದರು. ಇದೀಗ ಮುಂಬೈ ಮತ್ತು ಕೊಚ್ಚಿಗೆ ಚಿತ್ರತಂಡ ತೆರಳಲಿದೆ.

ಇನ್ನೂ ಕುಂದಾಪುರದಲ್ಲಿ ‘ಕಾಂತಾರ ಪಾರ್ಟ್ 1’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದೇ ವರ್ಷ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Share This Article