ಹೆಚ್ಚು ಸಂಬಳದ ಆಸೆಗೆ ಉಜ್ಬೇಕಿಸ್ತಾನಕ್ಕೆ ಹೋದ ಕರ್ನಾಟಕದ ಯುವಕರು – ಅನ್ನ, ನೀರು ಸಿಗದೇ ಪರದಾಟ

Public TV
1 Min Read

– ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಸಿಎಂ, ಪಿಎಂಗೆ ಮನವಿ

ಬೀದರ್: ಲಕ್ಷ ಲಕ್ಷ ಸಂಬಳದ ಆಸೆಗೆ ಕೆಲಸ ಅರಸಿ ಉಜ್ಬೇಕಿಸ್ತಾನಕ್ಕೆ (Uzbekistan) ಹೋಗಿದ್ದ ಬೀದರ್ (Bidar) ಹಾಗೂ ಕಲಬರಗಿ (Kalaburagi) ಮೂಲದ ಯುವಕರಿಗೆ ಸಂಕಷ್ಟ ಎದುರಾಗಿದ್ದು, ಉದ್ಯೋಗ ಹಾಗೂ ಅನ್ನ, ನೀರು ಇಲ್ಲದೆ ಪರದಾಡುತ್ತಿದ್ದಾರೆ.

ಬೀದರ್ ಹಾಗೂ ಕಲಬರಗಿಯ 14 ಮಂದಿ ಯುವಕರು ಲಕ್ಷಾಂತರ ಸಂಬಳದ ಆಸೆಗೆ ಮಧ್ಯವರ್ತಿಗಳಿಗೆ ಲಕ್ಷ ಲಕ್ಷ ಹಣ ನೀಡಿ ಉಜ್ಬೇಕಿಸ್ತಾನಕ್ಕೆ ತೆರಳಿ ಮೋಸ ಹೋಗಿದ್ದಾರೆ. ಅತ್ತ ಉದ್ಯೋಗವೂ ಇಲ್ಲದೇ ತಿನ್ನಲು ಅನ್ನ ನೀರು ಕೂಡ ಸಿಗದೇ ಇದೀಗ ಯುವಕರು ಪರದಾಡುವಂತಾಗಿದೆ. ಇದನ್ನೂ ಓದಿ: ರಾಗಾ ಹೊಲಿದ ಚಪ್ಪಲಿಗೆ 10 ಲಕ್ಷ ರೂ. ಆಫರ್ ತಿರಸ್ಕರಿಸಿದ ಚಮ್ಮಾರ

ಉಜ್ಬೇಕಿಸ್ತಾನಕ್ಕೆ ತೆರಳಿದವರ ಪೈಕಿ ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಯುವಕರು ಸೇರಿದ್ದಾರೆ. ವಿದೇಶದಿಂದ ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಮೋಸ ಹೋದ ಯುವಕರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ನಾವು ನಮ್ಮ ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಿದ್ದೇವೆ. ಇಲ್ಲಿ ಊಟ ಇಲ್ಲದೆ ಹಲವು ಜನ ಸತ್ತಿದ್ದಾರೆ. ಇದರಿಂದ ನಮಗೆ ಭಯವಾಗುತ್ತಿದೆ. ಬೇಗ ನಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳಿ ಎಂದು ಯುವಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆಟವಾಡುತ್ತಾ ಮೆಟ್ರೋ ಹಳಿಗೆ ಬಿದ್ದ ಮಗು – ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪಾರು

Share This Article