ʻ9 ಮಕ್ಕಳು ನೀರಲ್ಲಿ ಕೊಚ್ಚಿ ಹೋದ್ರು, ಮನೆ ನೆಲಸಮ ಆಗೋಯ್ತು, ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿ ಸಾಹೇಬ್ರೆʼ

By
2 Min Read

– ವಯನಾಡಿನಲ್ಲಿ ಮೈಸೂರು ಮೂಲದ ಸಂತ್ರಸ್ತೆ ಕಣ್ಣೀರು
– ನೆರವಿನ ಭರವಸೆ ಕೊಟ್ಟ ಸಿಎಂ

ವಯನಾಡು: ʻʻ18 ವರ್ಷದವಳಿದ್ದಾಗ ಒಂದೂವರೆ ವರ್ಷದ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಊರು ಬಿಟ್ಟೆ, ಸ್ವಂತ ಮನೆ ಕಟ್ಟಿದ್ದೆ. ಈಗ ಮನೆ ನೀರಲ್ಲಿ ಕೊಚ್ಚಿ ಹೋಯ್ತು, ಮಕ್ಕಳನ್ನೂ ಹೊತ್ಕೊಂಡು ಹೋಯ್ತು, ಮತ್ತೆ ಅದೇ ಸ್ಥಿತಿಗೆ ಬಂದು ನಿಂತಿದ್ದೇನೆ ಸಾಹೇಬ್ರೆ, ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿʼʼ ವಯನಾಡಿನ (Wayanad) ಮಪ್ಪಾಡಿಯಲ್ಲಿ ಉಂಟಾದ ಭೂಕುಸಿತದಲ್ಲಿ ಮನೆ ಕಳೆದುಕೊಂಡ ಮೈಸೂರು ಮೂಲದ ಸಂತ್ರಸ್ತೆ ಮಾದೇವಿ ಅವರ ನೋವಿನ ನುಡಿಗಳಿವು.

ಭೂಕುಸಿತದಲ್ಲಿ (Landslides) ಆಶ್ರಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಟಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಮಾದೇವಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ದೂರವಾಣಿಯ ಮೂಲಕ ಮಾತುಕತೆ ನಡೆಸಿದರು. ಜೊತೆಗೆ ರಾಜ್ಯ ಸರ್ಕಾರದಿಂದ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದರು. ಇದನ್ನೂ ಓದಿ: ಬಿಡಿಎ ಬಡಾವಣೆ ಮಾಡಲು ಜಮೀನು ಕೊಟ್ಟವರ ಕುಂದುಕೊರತೆ ನಿವಾರಿಸಿ – ಡಿಕೆಶಿಗೆ ಸುರೇಶ್‌ ಕುಮಾರ್‌ ಪತ್ರ

ಸಿಎಂ ಕರೆ ಮಾಡುತ್ತಿದ್ದಂತೆ ವೃದ್ಧ ಮಹಿಳೆ ಕಣ್ಣೀರು ಹಾಕಲು ಶುರು ಮಾಡಿದ್ರು. ಊರಲ್ಲಿ ಮಳೆಯಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ ಅಂತ ಊರು ಬಿಟ್ಟೆ. 18 ವರ್ಷದವಳಿದ್ದಾಗಲೇ ಒಂದೂವರೆ ವರ್ಷದ ಮಗುವನ್ನು ಕಂಕುಳಲ್ಲಿ ಹೊತ್ತು, ನೀಲಗಿರಿ ಕಾಫಿ ತೋಟಕ್ಕೆ ಬಂದು ಕೆಲಸ ಮಾಡಲು ಶುರು ಮಾಡಿದೆ. ಈಗ ಎಲ್ಲವನ್ನೂ ಕಳೆದುಕೊಂಡು ಮತ್ತೆ ಅದೇ ಸ್ಥಿತಿಗೆ ಬಂದಿದ್ದೇನೆ. ನನಗೀಗ 70 ವರ್ಷವಾಗಿದೆ, ಇನ್ನು ದುಡಿಯಲು ಶಕ್ತಿಯಿಲ್ಲ. ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿ ಸಾಹೇಬ್ರೆ ಎಂದು ಅಂಗಲಾಚಿದ್ದಾರೆ. ಇದನ್ನೂ ಓದಿ: ನ್ಯಾಯಾಂಗ ಬಂಧನ ಇಂದು ಅಂತ್ಯ- ಮತ್ತೆ ದರ್ಶನ್‌ ಜೈಲಿಗೆ ಕಳುಹಿಸಲು ರಿಮ್ಯಾಂಡ್‌ ಕಾಪಿ ಸಿದ್ಧತೆ

ಕಣ್ಣ ಮುಂದೆಯೇ 9 ಮಕ್ಕಳನ್ನ ನೀರು ಹೊತ್ಕೊಂಡು ಹೋಯ್ತು, ಮೂರು ಮನೆ ಸಂಪೂರ್ಣ ಮಟ್ಟ (ನೆಲಸಮ) ಆಗೋಯ್ತು, ನನ್ನ ಬಳಿ ಮೊಮ್ಮಗಳು ಬಿಟ್ಟು ಬೇರೆ ಯಾರೂ ಇಲ್ಲ ಮಾತ್ರ ಎಂದು ಕಣ್ಣೀರಿಟ್ಟರು. ಆಗ ಸಿಎಂ ದೂರವಾಣಿಯಲ್ಲೇ ಸಮಾಧಾನ ಹೇಳುವ ಪ್ರಯತ್ನ ಮಾಡಿದರು.

ಇದೇ ವೇಳೆ ಮಂಡ್ಯ ಮೂಲದ ಸಂತ್ರಸ್ತೆ ಚೈತ್ರಾ ಕೂಡ ಸಿಎಂ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ, ನಮಗೇನಾದ್ರೂ ಪರಿಹಾರ ಮಾಡಿಕೊಡಿ, ಈಗ ಮನೆಯೂ ಇಲ್ಲ, ಜಾಗವೂ ಇಲ್ಲ ಉಳಿದುಕೊಳ್ಳಲು ಏನಾದರೂ ಪರಿಹಾರ ಮಾಡಿಕೊಡಿ ಎಂದು ಬೇಡಿಕೊಂಡರು. ಇದನ್ನೂ ಓದಿ: Wayanad Landslide | ದಯವಿಟ್ಟು ಅಳಿಯನ ಮೃತ ದೇಹ ಹುಡುಕಿ, ಕೊನೆ ಬಾರಿ ನೋಡ್ತಿವಿ!

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಒಬ್ಬ ಮಿನಿಸ್ಟ್ರು, ಇಬ್ಬರು ಅಧಿಕಾರಿಗಳನ್ನ ಕಳಿಸಿದ್ದೀನಿ. ಅವರು ನಿಮ್ಮನ್ನು ಸಂಪರ್ಕ ಮಾಡ್ತಾರೆ. ಖಂಡಿತ ನಿಗಮೆ ಸಹಾಯ ಸಿಗುತ್ತದೆ ಎಂದು ಭರವಸೆ ನೀಡಿದರು.

Share This Article