ಮೆಟ್ರೋ, ಡಿಆರ್‌ಡಿಒ ಬ್ಲಾಸ್ಟ್‌ ಮಾಡ್ತೀನಿ ಅಂದಿದ್ದ ಯುವಕನ ಮತ್ತೊಂದು ವೀಡಿಯೋ ರಿಲೀಸ್‌

Public TV
2 Min Read

– ತನ್ನನ್ನ ಬಂಧಿಸಿದ್ರೆ ಡಿಬಾಸ್‌ ಪಕ್ಕದ ಸೆಲ್‌ಗೆ ಹಾಕಿ ಎಂದಿದ್ದ ಯುವಕ

ಚಿತ್ರದುರ್ಗ: ಕೆಲ ದಿನಗಳ ಹಿಂದೆಯಷ್ಟೇ ಎಲೆಕ್ಟ್ರಿಕಲ್‌ ವೈರಿಂಗ್ (Electrical wiring) ಮೂಲಕ ಮೆಟ್ರೋ, ಡಿಆರ್‌ಡಿಓ, ಐಐಎಸ್‌ಸಿ ಬ್ಲಾಸ್ಟ್‌ ಮಾಡುತ್ತೇನೆಂದು ವೀಡಿಯೋ ಹರಿಬಿಟ್ಟಿದ್ದ ಚಳ್ಳಕೆರೆ ಯುವಕನ ಮತ್ತೊಂದು ವೀಡಿಯೋ ಬಿಡುಗಡೆಯಾಗಿದೆ. ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಲಾದ ವೀಡಿಯೋದಲ್ಲಿ (Namma Metro) ಯುವಕ ಕ್ಷಮೆ ಕೇಳಿದ್ದಾನೆ.

ಏನಿದು ಪ್ರಕರಣ?
ಕೆಲ ದಿನಗಳ ಹಿಂದೆಯಷ್ಟೇ ಚಳ್ಳಕೆರೆಯ ಪೃಥ್ವಿರಾಜ್ ಎಂಬಾತ ಮೆಟ್ರೋ, ಡಿಆರ್‌ಡಿಓ, ಐಐಎಸ್‌ಸಿ ಬ್ಲಾಸ್ಟ್‌ ಮಾಡುವುದಾಗಿ ಬೆದರಿಕೆ ಹಾಕಿ ವೀಡಿಯೋ ಹರಿಬಿಟ್ಟಿದ್ದ. ಈ ಬೆನ್ನಲ್ಲೇ ಪೊಲೀಸರು ಆತನನ್ನ ವಶಕ್ಕೆ ಪಡೆದುಕೊಂಡಿದ್ದರು. ಡಿವೈಎಸ್ಪಿ ರಾಜಣ್ಣ ಅವರು ಪೃಥ್ವಿರಾಜ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ; ಸಂಸತ್‌ನಲ್ಲಿ ಧ್ವನಿ ಎತ್ತಿದ ಕಾಗೇರಿ

ಬ್ಲಾಸ್ಟ್‌ ವೀಡಿಯೋ ಹರಿಬಿಟ್ಟಿದ್ದೇಕೆ ಎಂದು ವಿಚಾರಿಸಿದಾಗ ಆತನ ತಾಯಿ ಕೆಲ ದಿನಗಳಿಂದ ಸಂಪರ್ಕಕ್ಕೆ ಬಂದಿರಲಿಲ್ಲ. ಅಮ್ಮನ ನಾಪತ್ತೆ ಕೇಸ್ ದಾಖಲಿಸಲು ಹೋದಾಗ ಪೊಲೀಸರು ಸ್ಪಂದಿಸಿಲ್ಲ. ನಾನು ಊರಿಗೆ ಬಂದಾಗ ಅಮ್ಮ ವಿಷಯ ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಪೊಲೀಸರು ನನ್ನ ತಾಯಿಯ ಮುಂದೆಯೇ ಥಳಿಸಿದ್ದರು. ನನ್ನ ತಾಯಿ ಕಣ್ಣೀರು ನೋಡಲಾಗದೇ ಕೋಪದಲ್ಲಿ ಆ ಮಾತು ಹೇಳಿ ವಿಡಿಯೋ ಮಾಡಿ ಬಿಟ್ಟಿದ್ದೆ. ಇದನ್ನೂ ಓದಿ: Wayanad Landslide| 6 ತಿಂಗಳ ಹಿಂದೆ ಗೃಹಪ್ರವೇಶ, ಈಗ ಆ ಮನೆ ಸಮೇತ ಜಲ ಸಮಾಧಿ!

ನಗೆ ಎಲೆಕ್ಟ್ರಿಕಲ್ ಕೆಲಸ ಮಾತ್ರ ಗೊತ್ತಿದೆ. ಹಾಗಾಗಿ ಎಲೆಕ್ಟ್ರಿಕಲ್ ವೈರಿಂಗ್ ಮೂಲಕ ಬ್ಲಾಸ್ಟ್ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದೆ. ಕೋಪದಲ್ಲಿ ಹೇಳಿದ್ದೇನೆಯೇ ಹೊರತು, ನಿಜಕ್ಕೂ ಬ್ಲಾಸ್ಟ್‌ ಮಾಡುವ ಉದ್ದೇಶ ಇಲ್ಲ. ಆ ರೀತಿ ಯಾವತ್ತಿಗೂ ಯೋಚನೆಯೂ ಮಾಡಿಲ್ಲ ಎಂದು ಕ್ಷಮೆ ಕೇಳಿದ ವೀಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಇದರಿಂದ ಎಚ್ಚರಿಕೆ ನೀಡಿದ್ದ ಪೊಲೀಸರು ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆಂದು ಪೃಥ್ವಿರಾಜ್‌ ಹೇಳಿದ್ದಾನೆ. ಇದಕ್ಕೂ ಮುನ್ನ ತನ್ನನ್ನು ಬಂಧಿಸಿದ್ರೆ ನಟ ದರ್ಶನ್‌ ಇರುವ ಪಕ್ಕದ ಸೆಲ್‌ಗೆ ಹಾಕಿ ಎಂದು ಕೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Wayanad Landslide| ಆರು ಕೈ, ಮೂರು ತಲೆ, ಎಂಟು ಕಾಲು, ಐದು ತಲೆ ಇರದ ದೇಹ!

Share This Article