ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್

By
2 Min Read

ನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಲ್ (Actress Sonal) ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ಆಹ್ವಾನ ಮಾಡಲು ಶುರು ಮಾಡಿದ್ದಾರೆ. ಇದನ್ನೂ ಓದಿ:ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ ಶ್ರೀಲೀಲಾ

ಸಿನಿಮಾದಲ್ಲಿ ಸದಾ ಸರ್ಪ್ರೈಸ್ ಪ್ಲಾನ್ ಮಾಡಿ ಪ್ರೇಕ್ಷಕರನ್ನ ಖುಷಿಪಡಿಸೋ ನಿರ್ದೇಶಕ ತರುಣ್ ತಮ್ಮ ಮದುವೆ ಇನ್ವಿಟೇಷನ್ ಅನ್ನು ಸೂಪರ್ ಆಗಿಯೇ ಪ್ಲಾನ್ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲಬ್ರೆಟಿಗಳು ಇನ್ವಿಟೇಷನ್ ಜೊತೆ ಒಂದು ಗಿಡಕೊಟ್ಟು ತಮ್ಮ ಮದುವೆಗೆ ಕರೆಯೋದು ಕಾಮನ್. ಆದರೆ ತರುಣ್ ಮತ್ತು ಸೋನಲ್ ತಮ್ಮ ವಿವಾಹ ಪತ್ರಿಕೆಯನ್ನ ಕಂಪ್ಲೀಟ್ ಆಗಿ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ.

ತರುಣ್ ನೀಡುತ್ತಿರುವ ಈ ಇನ್ವಿಟೇಷನ್‌ನಲ್ಲಿ ಮದುವೆ ಪತ್ರಿಕೆ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ. ವಿಶೇಷ ಅಂದರೆ ಮದುವೆ ಮುಗಿದ ನಂತ್ರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದರೆ ಸೋನಲ್ ಮತ್ತು ತರುಣ್ ಮದುವೆಯ ಪತ್ರಿಕೆಯನ್ನ ಒಂದು ಮಣ್ಣಿನ ಪಾಟ್‌ನಲ್ಲಿ ಹಾಕಿದ್ರೆ ಅದು ಮಣ್ಣಿನಲ್ಲಿ ಬೆರೆತು ಗಿಡ ಬೆಳೆಯುತ್ತದೆ.

 

View this post on Instagram

 

A post shared by PUBLiC TV (@publictv)

ಅದಷ್ಟೇ ಅಲ್ಲ, ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತರ ಅದು ಮಣ್ಣು ಸೇರಿದ್ರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬರೆದು ಖಾಲಿ ಆದರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಅಂತ ತರುಣ್ ಈ ರೀತಿ ಪ್ಲ್ಯಾನ್ ಮಾಡಿದ್ದಾರೆ.

ಇನ್ನು ಆಗಸ್ಟ್ 10, 11ರಂದು ನಡೆಯಲಿರುವ ತರುಣ್ ಮತ್ತು ಸೋನಲ್ ಮದುವೆಗೆ ಈಗಾಗಲೇ ಸಖಲ ಸಿದ್ಧತೆಗಳು ನಡೆದಿದೆ. ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಹಾಗೂ ನಾಯಕಿಯ ಮದುವೆಗೆ ಇಡೀ ಚಿತ್ರರಂಗ ಸಾಕ್ಷಿ ಆಗಲಿದೆ. ಸದ್ಯ ಮದುವೆ ಇನ್ವಿಟೇಷನ್‌ನಲ್ಲಿ ಸ್ಪೆಷಲ್ ಅನ್ನಿಸ್ತಿರೋ ಈ ಜೋಡಿ ಮದುವೆಯಲ್ಲಿ ಏನೆಲ್ಲಾ ಸರ್ಪ್ರೈಸ್ ಪ್ಲ್ಯಾನ್ ಮಾಡಿದೆ ಅಂತ ಕಾದು ನೋಡಬೇಕಿದೆ.

Share This Article