ಅಶ್ಲೀಲ ವೀಡಿಯೋ ವೀಕ್ಷಿಸಿ ಸಹೋದರಿಯ ಅತ್ಯಾಚಾರಗೈದು ಹತ್ಯೆ – ಪ್ರಕರಣ ಮುಚ್ಚಿಡಲು ತಾಯಿ, ಹಿರಿಯ ಸಹೋದರಿಯರ ಸಾಥ್

Public TV
1 Min Read

ಭೋಪಾಲ್: ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ 13 ವರ್ಷದ ಅಪ್ರಾಪ್ತನೊಬ್ಬ ತನ್ನ ತಂಗಿಯ ಮೇಲೆ ಅತ್ಯಾಚಾರವೆಸಗಿ (Rape) ಹತ್ಯೆಗೈದ (Murder) ಘಟನೆ ಮಧ್ಯಪ್ರದೇಶದ (Madhya Pradesh) ರೇವಾದಲ್ಲಿ ನಡೆದಿದೆ.

ಏಪ್ರಿಲ್ 24 ರಂದು ನಡೆದಿದ್ದ 9 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಈ ಘೋರ ಕೃತ್ಯವನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಪ್ರಕರಣ ಮುಚ್ಚಿಡಲು ಹಿರಿಯ ಸಹೋದರಿಯರು ಹಾಗೂ ತಾಯಿ ಸಹಾಯ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.

ಬಾಲಕಿ ವಿಷಜಂತು ಕಚ್ಚಿ ಮೃತಪಟ್ಟಿದ್ದಾಗಿ ಆರೋಪಿಗಳು ಕತೆ ಕಟ್ಟಿದ್ದರು. ಬಳಿಕ ಅನುಮಾನದ ಮೇಲೆ 50 ಜನರನ್ನು ವಿಚಾರಣೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದ್ದು, ಬಳಿಕ ಅಪ್ರಾಪ್ತನ ಮೊಬೈಲ್ ಪರಿಶೀಲನೆ ವೇಳೆ ಅಶ್ಲೀಲ ವೀಡಿಯೋ ವಿಕ್ಷಿಸಿರುವುದು ತಿಳಿದು ಬಂದಿತ್ತು. ನಂತರ ಹತ್ಯೆಗೊಳಗಾದ ಬಾಲಕಿಯ ಸಹೋದರ, ಆತನ ತಾಯಿ ಮತ್ತು 17 ಮತ್ತು 18 ವರ್ಷದ ಸಹೋದರಿಯರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ.

ಬಾಲಕಿ ತನ್ನ ತಂದೆಯ ಬಳಿ ಸಹೋದರ ಅತ್ಯಾಚಾರ ಎಸಗಿದ್ದನ್ನು ಹೇಳಲು ಮುಂದಾಗಿದ್ದರಿAದ ಬಾಲಕ ಆಕೆಯ ಕತ್ತು ಹಿಸುಕಿ ಹತ್ಯೆಗೆ ಯತ್ನಿಸಿದ್ದ. ಬಳಿಕ ಆಕೆಗೆ ಇನ್ನೂ ಜೀವ ಇರುವುದು ಅರಿತು ಆತನ ಹಿರಿಯ ಸಹೋದರಿಯರು ಹಾಗೂ ತಾಯಿಯ ಸಮ್ಮುಖದಲ್ಲಿ ಮತ್ತೆ ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

Share This Article