‘ರಾಜಾ ರಾಣಿ’ ಶೋಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸುತ್ತಿದೆ: ಅದಿತಿ ಪ್ರಭುದೇವ

Public TV
1 Min Read

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಸದ್ಯ ‘ರಾಜಾ ರಾಣಿ’ ರಿಯಾಲಿಟಿ ಶೋನ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ. ಇನ್ನೂ ಹಾಲು ಕುಡಿಯುವ ಮಗುವನ್ನು ಬಿಟ್ಟು ಶೋ ಬಂದಿದ್ದಾರೆ ಎಂದು ನೆಗೆಟಿವ್ ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರಿಸಿದ್ದಾರೆ. ಇದನ್ನೂ ಓದಿ:ಲೆನ್ಸ್ ಬಳಕೆಯಿಂದ ನಟಿ ಯಡವಟ್ಟು- ಜಾಸ್ಮಿನ್ ಕಣ್ಣಿನ ಕಾರ್ನಿಯಾಗೆ ಹಾನಿ

ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ರಂಜಿಸಿದ್ದ ಅದಿತಿ ಈಗ ಕಿರುತೆರೆಯಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಇದರ ನಡುವೆ ಇನ್ಸ್ಟಾಗ್ರಾಂ ಲೈವ್‌ಗೆ ಬಂದು ಅಭಿಮಾನಿಗಳ ಜೊತೆ ನಟಿ ಮಾತನಾಡಿದ್ದಾರೆ. ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಲೈಫ್ ಹೇಗೆ ನಡೆಯುತ್ತಿದೆ ಎಂದು ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ಅದಿತಿ ಮಾತನಾಡಿದ್ದಾರೆ.

ಇದು ತೀರಾ ವೈಯಕ್ತಿಕ ವಿಚಾರ ಆದರೂ ಹಂಚಿಕೊಳ್ಳಬೇಕು ಅನಿಸುತ್ತಿದೆ. ‘ರಾಜಾ ರಾಣಿ’ (Raja Rani Show) ತಂಡ ನನಗೆ ಬೆಂಬಲವಾಗಿ ನಿಂತಿದೆ. ನನ್ನ ಮಗಳ ಆರೈಕೆ ಮಾಡಲು ಆಗಾಗ ಬ್ರೇಕ್ ಕೊಡುತ್ತಾ ಇರುತ್ತಾರೆ. ನನ್ನ ಮಗುವನ್ನು ಬಿಟ್ಟು ಶೂಟಿಂಗ್ ಬರುತ್ತಿಲ್ಲ. ಬದಲಿಗೆ ಜೊತೆಗೆ ಕರೆದುಕೊಂಡು ಬಂದು ಮಗುವಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ ಎಂದು ಅದಿತಿ ತಿಳಿಸಿದ್ದಾರೆ.

ನನಗೆ ಮಗು ಹುಟ್ಟುವುದಕ್ಕೂ ಮುಂಚೆ, ನಾನು ಮತ್ತು ನನ್ನ ಮನೆ ಕೆಲಸದ ಜೊತೆ ಬ್ಲಾಗ್ ಆಯಿತು ಅಂತ ಇರುತ್ತಿದ್ದೆ. ಅದು ಹತ್ತಿರತ್ತಿರ ಒಂದು ವರ್ಷ. ಆದರೆ ಈಗ ವಾರಕ್ಕೆ ಒಮ್ಮೆ ಆದರೂ ಜನರ ಜೊತೆಗೆ ಬೆರೆಯುತ್ತೇನೆ. ಇದರಿಂದ ವಿಭಿನ್ನ ವ್ಯಕ್ತಿತ್ವಗಳು ತಿಳಿಯುತ್ತದೆ. ನಾನು ಶೂಟಿಂಗ್ ಬಂದರು ನನ್ನ ಮಗಳು ನನ್ನ ಜೊತೆಗೆ ಇರುತ್ತಾಳೆ. ಆದರೆ ಜನರನ್ನ ನೋಡ್ತೀನಿ, ಮಾತಾಡ್ತೀನಿ. ರಾಜಾ ರಾಣಿ ಶೋಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸುತ್ತಾ ಇದೆ ಎಂದಿದ್ದಾರೆ.

ಅಂದಹಾಗೆ, ಧೈರ್ಯಂ, ಸಿಂಗ, ತ್ರಿಬಲ್ ರೈಡಿಂಗ್, ರಂಗನಾಯಕಿ, ಬ್ರಹ್ಮಚಾರಿ, ಬಜಾರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದಿತಿ ನಾಯಕಿಯಾಗಿ ನಟಿಸಿದ್ದಾರೆ.

Share This Article