ಶಿವಮೊಗ್ಗದಲ್ಲಿ ಮಳೆ ಅಬ್ಬರ – 3 ಮನೆಗಳು ಧರೆಗೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Public TV
1 Min Read

ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಯ (Rain) ಅಬ್ಬರ ಮುಂದುವರಿದ ಹಿನ್ನೆಲೆ ಶಿವಮೊಗ್ಗ (Shivamogga) ಜಿಲ್ಲೆಯಾದ್ಯಂತ ಶಾಲಾ ಕಾಲೇಜು ಹಾಗೂ ಅಂಗನವಾಡಿಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಭಾರೀ ಮಳೆಯ ಹಿನ್ನೆಲೆ ಇಂದು ರಜೆ ಘೋಷಣೆ ಮಾಡಿ ಆಯಾ ತಾಲೂಕಿನ ತಹಶೀಲ್ದಾರ್‌ಗಳು ಆದೇಶ ಹೊರಡಿಸಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಆಯಾ ತಾಲೂಕಿನ ತಹಶೀಲ್ದಾರ್‌ಗಳು ರಜೆ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಎಕ್ಸ್‌ ಖಾತೆಯಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿದ ವಿಶ್ವನಾಯಕ ಮೋದಿಗೆ ಎಲಾನ್‌ ಮಸ್ಕ್‌ ಅಭಿನಂದನೆ

ಇನ್ನು ಧಾರಾಕಾರ ಮಳೆಗೆ 3 ಮನೆಗಳು ಧರೆಗುರುಳಿವೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಗಾಂಧಿನಗರದಲ್ಲಿ ಘಟನೆ ನಡೆದಿದೆ. ಹಬೀಬಾ, ಇನಾಯತ್ ಹಾಗೂ ನಿಸಾರ್ ಎಂಬವರಿಗೆ ಸೇರಿದ ಮನೆಗಳು ಕುಸಿದು ನೆಲಸಮವಾಗಿವೆ. ಮನೆ ಬಿದ್ದರೂ ಸ್ಥಳಕ್ಕೆ ಬಾರದ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ 105 ಮಂದಿ ಸಾವು – 300ಕ್ಕೂ ಹೆಚ್ಚು ಭಾರತೀಯರು ತವರಿಗೆ!

Share This Article