ಜಾನ್ವಿ ಕಪೂರ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲಾದ ನಟಿ

Public TV
1 Min Read

ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಫ್ಯಾನ್ಸ್‌ಗೆ ಇದು ಬ್ಯಾಡ್ ನ್ಯೂಸ್. ಜಾನ್ವಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಇದೀಗ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:20 ಕೋಟಿ ಮೌಲ್ಯದ ಪ್ಲ್ಯಾಟ್ ಖರೀದಿಸಿದ ಅಥಿಯಾ ಶೆಟ್ಟಿ ದಂಪತಿ

ಅನಂತ್ ಅಂಬಾನಿ, ರಾಧಿಕಾ ಮದುವೆಯ ಬಳಿಕ ಜಾನ್ವಿ ಕಪೂರ್ ಚೆನ್ನೈಗೆ ತೆರಳಿದರು. ಅಲ್ಲಿನ ಕುಟುಂಬಸ್ಥರ ಮನೆಗೆ ಭೇಟಿ ನೀಡಿದ್ದ ವೇಳೆ ಫುಡ್ ಪಾಯ್ಸನ್ ಆಗಿದ್ದು, ನಟಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ನಟಿ ಡಿಸ್ಚಾರ್ಜ್ ಆಗಲಿದ್ದಾರೆ.

ಚೆನ್ನೈನಲ್ಲಿ ಸೇವಿಸಿದ ಆಹಾರದಿಂದಲೇ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಲ್ಲಿರುವಾಗಲೇ ನಟಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಕ್ಕೆ ನಟಿ ಚೇತರಿಕೊಂಡಿದ್ದಾರೆ.  ಜಾನ್ವಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಅಂದಹಾಗೆ, ಸ್ಟಾರ್ ಕಿಡ್ ಎಂಬ ಆರೋಪದ ನಡುವೆಯೂ ಜಾನ್ವಿ ಕಪೂರ್‌ಗೆ ಬೇಡಿಕೆ ಕಮ್ಮಿಯಾಗಿಲ್ಲ. ತೆಲುಗು ಮತ್ತು ಬಾಲಿವುಡ್‌ನಲ್ಲಿ ಕೈತುಂಬಾ ಅವಕಾಶಗಳಿವೆ. ಜ್ಯೂ.ಎನ್‌ಟಿಆರ್‌ ಜೊತೆಗಿನ ‘ದೇವರ’ (Devara), ರಾಮ್ ಚರಣ್ ಜೊತೆಗಿನ ಸಿನಿಮಾ, ಇದರ ನಡುವೆ ನ್ಯಾಚುರಲ್ ಸ್ಟಾರ್ ನಾನಿಗೆ ಶ್ರೀದೇವಿ ಪುತ್ರಿ ಹೀರೋಯಿನ್ ಆಗಿದ್ದಾರೆ.

Share This Article