ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಬ್ಯಾಡ್‌ ನ್ಯೂಸ್- ಡಿಸೆಂಬರ್‌ನಲ್ಲೂ ‘ಪುಷ್ಪ 2’ ರಿಲೀಸ್ ಆಗೋದು ಡೌಟ್

Public TV
1 Min Read

ಹುನಿರೀಕ್ಷಿತ ‘ಪುಷ್ಪ 2’ (Pushpa 2) ಸಿನಿಮಾ ಸದ್ಯ ಟೀಸರ್ ಮತ್ತು ಸಾಂಗ್‌ನಿಂದ ಭಾರೀ ಮೆಚ್ಚುಗೆ ಗಳಿಸಿದೆ. ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿರುವ ಫ್ಯಾನ್ಸ್‌ಗೆ ಈಗ ಬ್ಯಾಡ್ ನ್ಯೂಸ್ ಸಿಕ್ಕಿದೆ. ಡಿಸೆಂಬರ್‌ನಲ್ಲೂ ಕೂಡ ‘ಪುಷ್ಪ 2’ ಸಿನಿಮಾ ರಿಲೀಸ್ ಆಗೋದು ಅನುಮಾನ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಪುಷ್ಪ 2’ ಸಿನಿಮಾ ಇದೇ ಆ.15ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಡಿಸೆಂಬರ್‌ಗೆ ಮುಂದೂಡಲಾಗಿತ್ತು. ಆದರೆ ಸಿನಿಮಾ ರಿಲೀಸ್ ಆಗೋದು ಮುಂದಿನ ವರ್ಷ ಎಂದು ಹರಿದಾಡುತ್ತಿದೆ. ಇದನ್ನೂ ಓದಿ:‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್

ಇನ್ನೂ ಸರಿಯಾದ ಸಮಯದಲ್ಲಿ ಶೂಟಿಂಗ್ ಮಾಡುತ್ತಿಲ್ಲ ಎಂದು ಅಲ್ಲು ಅರ್ಜುನ್ (Allu Arjun) ಅಸಮಾಧಾನ ತೊಡಿಕೊಂಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಅಲ್ಲು ಅರ್ಜುನ್ ಗಡ್ಡವನ್ನು ಮತ್ತಷ್ಟು ಟ್ರಿಮ್ ಮಾಡಿಕೊಂಡಿದ್ದಾರಂತೆ. ಸದ್ಯ ಕುಟುಂಬದ ಜೊತೆ ಯೂರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಇತ್ತ ನಿರ್ದೇಶಕ ಸುಕುಮಾರ್ ಕೂಡ ಅಮೆರಿಕಾಗೆ ಹೋಗಿದ್ದಾರೆ. ಇದರಿಂದ ಚಿತ್ರೀಕರಣಕ್ಕೆ ವಿಳಂಬ ಆಗುತ್ತಿದೆ.

ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಟೀಸರ್ ಮತ್ತು ಸಾಂಗ್ ಸೂಪರ್ ಹಿಟ್ ಆಗಿದೆ. ಇದರ ನಡುವೆ ರೀಶೂಟ್ ಆಗುತ್ತದೆಯೇ? ಇನ್ನೂ ಚಿತ್ರೀಕರಣ ಮುಗಿದಿಲ್ವಾ? ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ.

ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಡಾಲಿ ಧನಂಜಯ, ಅನಸೂಯ, ಫಹಾದ್ ಪಾಸಿಲ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

Share This Article