ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

Public TV
1 Min Read

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಜು.12ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಬಾಲಿವುಡ್ ನಟ, ನಟಿಯರು ಭಾಗಿಯಾಗಿದ್ದಾರೆ. ಇದರ ನಡುವೆ ಈಗ 160 ವರ್ಷದ ಹಿಂದಿನ ಸೀರೆಯುಟ್ಟು ಮಿಂಚಿದ ಆಲಿಯಾ ಭಟ್ (Alia Bhatt) ಲುಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಅನಂತ್, ರಾಧಿಕಾ ಮದುವೆಗೆ ಯಶ್ (Yash) ಮತ್ತು ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ (Rashmika Mandanna), ದೀಪಿಕಾ ಪಡುಕೋಣೆ, ಶಾರುಖ್, ಸಲ್ಮಾನ್ ಖಾನ್, ಬಿಗ್ ಬಿ ಫ್ಯಾಮಿಲಿ ಸೇರಿದಂತೆ ಹೀಗೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದರು. ಆಲಿಯಾ ಮತ್ತು ರಣ್‌ಬೀರ್ ಕಪೂರ್ ದಂಪತಿ ಕೂಡ ಮದುವೆಯಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದರು. ಇದನ್ನೂ ಓದಿ:‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

ಇನ್ನೂ ಮದುವೆಯಲ್ಲಿ ಆಲಿಯಾ ಭಟ್, 160 ವರ್ಷದ ಹಳೆಯ ಆಶಾವಲಿ ಸೀರೆಯನ್ನು ಧರಿಸಿ ಮಿಂಚಿದ್ದು ಎಲ್ಲರ ಗಮನ ಸೆಳೆದಿದೆ. ನಟಿ ಧರಿಸಿದ ಪಿಂಕ್ ಸೀರೆಯನ್ನು ಗುಜರಾತ್‌ನಲ್ಲಿ ತಯಾರಿಸಲಾಗಿದೆ. ಶುದ್ಧ ರೇಷ್ಮೆ, ಝರಿಯನ್ನು ಬಳಸಿದ್ದಾರೆ. ಜೊತೆಗೆ 6 ಗ್ರಾಂ ಶುದ್ಧ ಚಿನ್ನವನ್ನು ಹಾಕಿ ಸೀರೆಯನ್ನು ತಯಾರಿಸಲಾಗಿದೆ.

ಶುದ್ಧ ರೇಷ್ಮೆ ಮತ್ತು 99%ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಕೂಡ ಇದು ಹೊಂದಿದೆ. ಗುಜರಾತ್‌ನಲ್ಲಿ ತಯಾರಿಸಿದ ಈ ಸೀರೆಗೆ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಹೊಸದಾಗಿ ಡಿಸೈನ್ ಮಾಡಿದ್ದಾರೆ. ಈ ಸೀರೆಯ ಬೆಲೆ 2 ಕೋಟಿ ರೂ. ಮೌಲ್ಯದಾಗಿದೆ. ಸದ್ಯ ಆಲಿಯಾ ಭಟ್ ಲುಕ್ ಮತ್ತು ಸೀರೆಯ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.

Share This Article