ಪದವಿ ಕಾರ್ಯಕ್ರಮದಲ್ಲಿ Free Palestine ಘೋಷಣೆ – ಯುಎಇಯಿಂದ ವಿದ್ಯಾರ್ಥಿ ಗಡಿಪಾರು

Public TV
1 Min Read

ಅಬುದಾಭಿ: ಪದವಿ ಪ್ರದಾನ ಸಮಾರಂಭದಲ್ಲಿ ಫ್ರೀ ಪ್ಯಾಲೆಸ್ತೀನ್ (Free Palestine) ಘೋಷಣೆ  ಕೂಗಿದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯನ್ನು ಮುಸ್ಲಿಂ ರಾಷ್ಟ್ರ ಯುಎಇ (UAE) ದೇಶದಿಂದಲೇ ಗಡಿಪಾರು ಮಾಡಿದೆ.

ಮೇ ತಿಂಗಳಲ್ಲಿ ಅಬುಧಾಬಿಯಲ್ಲಿರುವ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ (New York University) ಪದವಿ ಪ್ರದಾನ ಸಮಾರಂಭದಲ್ಲಿ ಸಾಂಪ್ರದಾಯಿಕ ಪ್ಯಾಲೆಸ್ಟೀನಿಯನ್ ಕಪ್ಪು-ಬಿಳುಪು ಕೆಫಿಯೆಹ್ ಸ್ಕಾರ್ಫ್ ಅನ್ನು ಧರಿಸಿದ ವಿದ್ಯಾರ್ಥಿಯೊಬ್ಬ ಫ್ರೀ ಪ್ಯಾಲೆಸ್ತೀನ್  ಎಂದು ಘೋಷಣೆ ಕೂಗಿದ್ದ. ಇದನ್ನೂ ಓದಿ: ಚಾರ್ಮಾಡಿಯಲ್ಲಿ ಪ್ರವಾಸಿಗರ ಹುಚ್ಚಾಟ – ಬುದ್ಧಿ ಕಲಿಸಲು ಬಟ್ಟೆ ಹೊತ್ತೊಯ್ದ ಪೊಲೀಸರು

ಘೋಷಣೆ ಕೂಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದ ಹಿನ್ನೆಲೆಯಲ್ಲಿ ಆತನನ್ನು ಯುಎಇಯಿಂದ ಗಡಿಪಾರು (Deported) ಮಾಡಲಾಗಿದೆ ಎಂದು ವರದಿಯಾಗಿದೆ. ಈ ವಿಚಾರಕ್ಕೆ ಯುಎಇ ಸರ್ಕಾರವನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಾಧ್ಯಮ ತನ್ನ ವರದಿಯಲ್ಲಿ ತಿಳಿಸಿದೆ.

ಪದವಿ ಪ್ರದಾನ ಸಮಾರಂಭಕ್ಕೆ ಮೊದಲೇ ವಿದ್ಯಾರ್ಥಿಗಳಿಗೆ ಎಲ್ಲಾ ನಿಯಮಗಳನ್ನು ತಿಳಿಸಲಾಗಿತ್ತು. ಕ್ಯಾಂಪಸ್‌ನಲ್ಲಿ ಎಲ್ಲಿಯೂ ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ. ವಸತಿ ಕಟ್ಟಡಗಳಲ್ಲಿಯೂ ಸಹ ಧ್ವಜ ಹಾರಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾನೆ.

Share This Article