ಮಂಗಳೂರಲ್ಲಿ ಮುಂದುವರಿದ ಮಳೆಯ ಅಬ್ಬರ – ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Public TV
1 Min Read

ಮಂಗಳೂರು: ತಾಲೂಕಿನಾದ್ಯಂತ (Mangaluru) ಮಳೆಯ (Rain) ಅಬ್ಬರ ಮುಂದುವರಿದಿದ್ದು, ತಾಲೂಕಿನ ಎಲ್ಲಾ ಶಾಲಾ (School) ಕಾಲೇಜುಗಳಿಗೆ ಇಂದು (ಜು.08) ರಜೆ ಘೋಷಣೆ ಮಾಡಲಾಗಿದೆ.

ಅಂಗನವಾಡಿಯಿಂದ, ದ್ವಿತೀಯ ಪಿಯುಸಿವರೆಗಿನ ಸರ್ಕಾರಿ (PU Colleges), ಅನುದಾನಿತ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿ ಮಂಗಳೂರು ತಹಶಿಲ್ದಾರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆ ಹಿನ್ನೆಲೆ: ದಕ್ಷಿಣ ಕನ್ನಡದ ಗಿರಿತಾಣ, ಶಿಖರಗಳಿಗೆ ಚಾರಣ ನಿಷೇಧ

ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಭೂ ಕುಸಿತ, ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದೆ. ಹೀಗಾಗಿ ಇನ್ನಷ್ಟು ಪ್ರಾಕೃತಿಕ ವಿಕೋಪ ಸಂಭವಿಸುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗಿರಿತಾಣ, ಶಿಖರಗಳಲ್ಲಿ ಚಾರಣಕ್ಕೆ ಪ್ರವಾಸಿಗರು ತೆರಳದಂತೆ ನಿಷೇಧ ಹೇರಲಾಗಿದೆ.

ನದಿ ಹಾಗೂ ಸಮುದ್ರ ತಟದಲ್ಲಿ ಈಜು ಮೋಜು-ಮಸ್ತಿ, ನೀರಿಗೆ ಇಳಿಯೋದು, ಮೀನು ಹಿಡಿಯುವುದು ಇತ್ಯಾದಿ ಚಟುವಟಿಕೆಗಳಿಗೂ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಮಹಿಳಾ‌ ಮೋರ್ಚಾದಿಂದ ಉಚಿತ‌ ಹೊಲಿಗೆ ಯಂತ್ರ ವಿತರಣೆ

Share This Article