ದರ್ಶನ್ ಗ್ಯಾಂಗ್ ಕ್ರೌರ್ಯ ಮತ್ತಷ್ಟು ಬಯಲು- ಸ್ವಾಮಿಗೆ ಶೆಡ್‍ನಲ್ಲಿ ಊಟ ಕೊಟ್ಟು ಹಲ್ಲೆ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದರ್ಶನ್ (Actor Darshan) & ಗ್ಯಾಂಗ್‍ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್‍ನ ಜೈಲುವಾಸ ಮತ್ತೆ 14 ದಿನಗಳ ಕಾಲ ಮುಂದುವರಿದಿದೆ. ಈ ಮಧ್ಯೆ ಕೊಲೆ ಕೇಸ್ ಸಂಬಂಧ ತನಿಖೆಯನ್ನ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಆಳಕ್ಕಿಳಿದಷ್ಟು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ರೇಣುಕಾಸ್ವಾಮಿ ಶೆಡ್‍ಗೆ ಬಂದಿದ್ದು ಯಾವಾಗ..? ದರ್ಶನ್ ಶೆಡ್‍ಗೆ ಬರುವುದಕ್ಕೂ ಮುನ್ನ ಅಲ್ಲಿ ಏನೆಲ್ಲಾ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೂನ್ 8 ರಂದು ರೇಣುಕಾಸ್ವಾಮಿಯನ್ನ `ಡಿ’ ಗ್ಯಾಂಗ್‍ನವರು ಪಟ್ಟಣಗೆರೆ ಶೆಡ್‍ಗೆ ಕರೆತಂದು ಹಿಗ್ಗಾಮುಗ್ಗ ಥಳಿಸಿ ಹಲ್ಲೆ ಮಾಡಿದ್ರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ- ದರ್ಶನ್‍ಗೆ 40 ಲಕ್ಷ ಕೊಟ್ಟ ಮೋಹನ್ ರಾಜ್‍ಗೆ ಮತ್ತೆ ನೋಟಿಸ್

ಮಾರಣಾಂತಿಕ ಹಲ್ಲೆಗೆ ಶೆಡ್‍ನಲ್ಲೇ ರೇಣುಕಾಸ್ವಾಮಿ (Renukaswamy) ಉಸಿರು ಚೆಲ್ಲಿದ್ದ. ಈ ವಿಚಾರವಾಗಿ ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಬಂದಿದ್ದ ರೇಣುಕಾಸ್ವಾಮಿ ಹಲ್ಲೆ ಮಾಡಿದ್ದ ಗ್ಯಾಂಗ್ ದರ್ಶನ್ ಎಂಟ್ರಿಯಾಗೋದಕ್ಕೂ ಮುಂಚೆ ಊಟ ಕೊಟ್ಟಿರೋದು ಬಯಲಾಗಿದೆ. ಸಂಜೆ 4:30 ರಿಂದ 5 ಗಂಟೆ ಆಸುಪಾಸಿನಲ್ಲಿ ರೇಣುಕಾಸ್ವಾಮಿಗೆ ಊಟ ನೀಡಲಾಗಿದ್ದು, ಸಾವು ಸಂಭವಿಸಿದ್ದು ಎಷ್ಟು ಗಂಟೆಗೆ ಎಂದು ತಿಳಿಯಲು ಮತ್ತೆ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಹೊಟ್ಟೆ ಒಳಗಿನ ಊಟದ ಜೀರ್ಣ ಕ್ರಿಯೆ ಬಗ್ಗೆ ಸ್ಪಷ್ಟನೆ ತೆಗೆದುಕೊಳ್ಳಲು ಪೊಲೀಸರು ತೀರ್ಮಾನ ಮಾಡಿದ್ದಾರೆ. ಫಾರೆನ್ಸಿಕ್ ತಜ್ಞರು ನೀಡಿರೋ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸ್ವಲ್ಪ ಆಹಾರ ಇದ್ದದ್ದು ನಿಜ ಎಂದು ಹೇಳಿದ್ದಾರೆ.

Share This Article