ಇಷ್ಟಪಟ್ಟವನನ್ನು ಮದುವೆಯಾಗಿದ್ದಕ್ಕೆ ಕುಟುಂಬಸ್ಥರಿಂದ್ಲೇ ಯುವತಿಯ ಬರ್ಬರ ಹತ್ಯೆ

By
1 Min Read

ಜೈಪುರ: ರಾಜಸ್ಥಾನದ (Rajastan) ಝಲಾವರ್‌ನಲ್ಲಿ 24 ವರ್ಷದ ಯುವತಿಯೊಬ್ಬಳು ತಾನು ಇಷ್ಟಪಟ್ಟವನನ್ನು ಮದುವೆಯಾದ ಕಾರಣಕ್ಕೆ ಆಕೆಯ ಮನೆಯವರೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ವಿವರಗಳ ಪ್ರಕಾರ, ಪತಿಯ ಮುಂದೆಯೇ ಯುವತಿಯನ್ನು ಆಕೆಯ ಕುಟುಂಬಸ್ಥರು ಅಪಹರಣ ಮಾಡಿದ್ದಾರೆ. ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಲ್ಲದೇ ಆಕೆಯ ಮೃತದೇಹವನ್ನು ಸುಡಲಾಗಿದೆ.

ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ಯುವತಿ ತನ್ನ ಕುಟುಂಬದ ವಿರುದ್ಧವಾಗಿ ರವಿ ಭೀಲ್ ಎಂಬಾತನನ್ನು ಮದುವೆಯಾಗಿದ್ದಾಳೆ. ಅಲ್ಲದೇ ವಿಚಾರ ಗೊತ್ತಾಗಿ ಯುವತಿ ಕುಟುಂಬಸ್ಥರು ತಮ್ಮ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ದಂಪತಿ ಬೇರೆ ಕಡೆ ನೆಲೆಸಿದ್ದರು.

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ದಂಪತಿ ವಾಸವಾಗಿದ್ದು, ಬ್ಯಾಂಕ್‌ಗೆ ಭೇಟಿ ನೀಡುವ ಬಗ್ಗೆ ಖಚಿತ ಮಾಹಿತಿ ಪಡೆದ ಕುಟುಂಬದ ಸದಸ್ಯರು ಆಕೆಯನ್ನು ಅಲ್ಲಿಂದ ಅಪಹರಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದ್ರೆ 500ರೂ. ದಂಡ- ಬಿಬಿಎಂಪಿ ಆಯುಕ್ತ ಎಚ್ಚರಿಕೆ

ಇತ್ತ ಪತ್ನಿ ಕಾಣೆಯಾಗಿರುವ ಕುರಿತು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈ ನಡುವೆ ಕುಟುಂಬಸ್ಥರು ಆಕೆಯ ದೇಹವನ್ನು ಸುಟ್ಟು ಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಮಹಿಳೆಯ ದೇಹ 80%ಕ್ಕೂ ಹೆಚ್ಚು ಸುಟ್ಟಿತ್ತು. ಇನ್ನು ಆಕೆಯ ಕುಟುಂಬ ಸದಸ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ.

ಸದ್ಯ ಮಹಿಳೆಯ ಸುಟ್ಟ ಅವಶೇಷಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನಕ್ಕೆ ಕಳುಹಿಸಲಾಗಿದೆ.

Share This Article