ರೇಣುಕಾಸ್ವಾಮಿ ಕೊಲೆ ಪ್ರಕರಣ- ದರ್ಶನ್‍ಗೆ 40 ಲಕ್ಷ ಕೊಟ್ಟ ಮೋಹನ್ ರಾಜ್‍ಗೆ ಮತ್ತೆ ನೋಟಿಸ್

Public TV
1 Min Read

– ಪವಿತ್ರಾ ಆಪ್ತೆ ಸಮತಾಗೂ ಟೆನ್ಶನ್
– ಬಿಜೆಪಿ ಶಾಸಕನ ಕಾರು ಚಾಲಕ ಎಸ್ಕೇಪ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ಗ್ಯಾಂಗ್‍ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಟ್ವಿಸ್ಟ್ ಸಿಗುತ್ತಿದೆ.

ರೇಣುಕಾಸ್ವಾಮಿ ಹತ್ಯೆ ಕೇಸ್‍ನಲ್ಲಿ ಮೂವರಿಗೆ ನೋಟಿಸ್ ಕೊಡಲಾಗಿದೆ. ಅದರಲ್ಲೂ ಮಾಜಿ ಉಪಮೇಯರ್ ಮೋಹನ್ ರಾಜ್‍ಗೆ 2ನೇ ಬಾರಿ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಪ್ರಕರಣ ಸಂಬಂಧ ವಿಚಾರಣೆಯ ವೇಳೆ ಮೋಹನ್ ರಾಜ್ ರಿಂದ 40 ಲಕ್ಷ ಹಣ ಪಡೆದಿದ್ದ ಬಗ್ಗೆ ದರ್ಶನ್ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಯಾವ ಉದ್ದೇಶಕ್ಕಾಗಿ ದರ್ಶನ್‍ಗೆ ಹಣ ನೀಡಿದ್ದಾರೆಂದು ತಿಳಿಸಲು ನೋಟಿಸ್ ನೀಡಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ; ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

ಪ್ರಕರಣ ಸಂಬಂಧ ಪವಿತ್ರಾಗೌಡ ಸ್ನೇಹಿತೆ ಸಮತಗೂ ನೋಟಿಸ್ ನೀಡಲಾಗಿದೆ. ಆರೋಪಿಯೊಬ್ಬನಿಗೆ ಹಣಕಾಸಿನ ಸಹಾಯ ಮಾಡಿರೋ ಆರೋಪ ಈಕೆಯ ಮೇಲಿದೆ. ಇನ್ನು ಬೆಂಗಳೂರಿನ ಬಿಜೆಪಿ ಶಾಸಕನ ಕಾರು ಚಾಲಕ ಕಾರ್ತಿಕ್ ಪುರೋಹಿತ್‍ನಿಗೂ ನೋಟಿಸ್ ಕೊಡಲಾಗಿದೆ. ಆದರೆ ನೋಟಿಸ್ ತಲುಪುತ್ತಿದ್ದಂತೆಯೇ ಈತ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಆರೋಪಿ ಪ್ರದೋಷ್‍ಗೆ ಕಾರ್ತಿಕ್ ಪುರೋಹಿತ್ ಆಪ್ತ ಎಂಬ ಮಾಹಿತಿ ಲಭಿಸಿದೆ.

Share This Article