ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿಳಂಬ – ಸಾರಿಗೆ ಬಸ್ ಜಪ್ತಿ

By
1 Min Read

ಬೆಳಗಾವಿ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಸಾರಿಗೆ ಇಲಾಖೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ಕೋರ್ಟ್ (Court) ಆದೇಶದಂತೆ ಸಾರಿಗೆ ಬಸ್‍ನ್ನು (KSRTC) ಜಪ್ತಿ ಮಾಡಲಾಗಿದೆ.

ಈ ಹಿಂದೆ ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದೇಶ ನೀಡಿ ಐದು ವರ್ಷ ಕಳೆದರೂ ಪರಿಹಾರ ನೀಡದ ಹಿನ್ನೆಲೆ ಬಸ್‍ನ್ನು ಜಪ್ತಿ ಮಾಡುವಂತೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸ್ಥಳೀಯ ನ್ಯಾಯಾಲಯ ಆದೇಶಿಸಿತ್ತು. ಇದೀಗ ಅಧಿಕಾರಿಗಳು ಬಸ್‍ನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಬೆಂಗ್ಳೂರಿಗೆ ವರ್ಗಾವಣೆ?- CISF ಹೇಳಿದ್ದೇನು?

2019ರಲ್ಲಿ ಕೂಡ್ಲಿಗಿಯ ಗೋವಿಂದಗಿರಿ ಗ್ರಾಮದ ಬಳಿ ದಾವಣಗೆರೆ ಡಿಪೋಗೆ ಸೇರಿದ ಸಾರಿಗೆ ಬಸ್ ಮಾರೆಪ್ಪ ಎಂಬವರಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಮಾರೆಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ವಕೀಲ ಜಿ.ಸೀತಾರಾಮ್ ದಾವೆ ಹೂಡಿದ್ದರು. ಇದನ್ನೂ ಓದಿ: ಪೊಲೀಸರ ಹತ್ಯಾಕಾಂಡ ಪ್ರಕರಣ – 9 ವರ್ಷಗಳ ಬಳಿಕ ನಕ್ಸಲ್ ಕೋಮುಲು ಅರೆಸ್ಟ್

Share This Article