ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆಯಿಂದ ನರಳಾಟ – ಸಂತ್ರಸ್ತ ಮಹಿಳೆಯರಿಂದ ಡಿಸಿ ಕಚೇರಿ ಮತ್ತಿಗೆಗೆ ಯತ್ನ!

Public TV
1 Min Read

– ಸರ್ಕಾರದಿಂದ ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಹಾವೇರಿ: ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ನೂರಾರು ಮಹಿಳೆಯರು ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿ ಹಾವೇರಿ ಡಿಸಿ ಕಚೇರಿ ಮುಂದೆ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದಾರೆ. ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರನ್ನ ಪೊಲೀಸರು ತಡೆಹಿಡಿದ್ದಾರೆ. ಪೊಲೀಸರು ಮುತ್ತಿಗೆ ಹಾಕಲು ಬಂದ ಮಹಿಳೆಯರನ್ನು ಗೇಟ್ ಬಳಿ ತಡೆದ ನಂತರ ಮಾತಿನ ಚಕಮಕಿ ಏರ್ಪಟ್ಟಿದೆ. ಅರೆಬೆತ್ತಲೆ ಪ್ರತಿಭಟನೆಯಲ್ಲಿ ನೊಂದ ಮಹಿಳೆಯರು ಕಣ್ಣೀರು ಹಾಕಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 6,187 ಡೆಂಗ್ಯೂ ಪ್ರಕರಣ ಪತ್ತೆ – ಬೆಂಗ್ಳೂರಲ್ಲಿ ಮನೆ ಮನೆ ಸಮೀಕ್ಷೆ ನಡೆಸುವಂತೆ ಪಾಲಿಕೆಗೆ ಸೂಚನೆ!

ಅಲ್ಲದೇ ಪ್ರತಿಭಟನಾ ನಿರತರ ಮಹಿಳೆಯರು ಕೆಲಕಾಲ ಕೈಯಲ್ಲಿ ಕಲ್ಲು ಹಿಡಿದು ಸಾರ್ವಜನಿಕರನ್ನು ಡಿಸಿ ಕಚೇರಿ ಒಳಗೆ ಬಿಡದಂತೆ ತಡೆದಿದ್ದಾರೆ. ನಮ್ಮನ್ನೂ ಬಂಧಿಸಿ, ಇಲ್ಲವೇ ಉಸ್ತುವಾರಿ ಸಚಿವರ ಭೇಟಿಗೆ ಅನುಮತಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ – ರೈತರಿಂದ ಭಾರೀ ಆಕ್ರೋಶ!

800ಕ್ಕೂ ಹೆಚ್ಚು ಮಹಿಳೆಯರು ಅಧಿಕೃತ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗರ್ಭಕೋಶ ಕಳೆದುಕೊಂಡಿದ್ದಾರೆ. ಅವರಿಗೆಲ್ಲಾ ದುಡಿದು ತಿನ್ನಲು ಆಗುತ್ತಿಲ್ಲ. ಸರ್ಕಾರ ಪರಿಹಾರ ನೀಡಬೇಕು, 9 ವರ್ಷದಿಂದ ಹೋರಾಟ ಮಾಡಿದರೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಸಚಿವ ಶಿವಾನಂದ ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: IPL 2025: ಮೆಗಾ ಹರಾಜು ಪ್ರಕ್ರಿಯೆ ಶುರು; ರಿಟೇನ್‌ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ!

Share This Article