ಶುಭಂ ಗೋಲ್ಡ್ ನಂದಿನಿ ಹಾಲಿನ ದರ 2 ರೂ. ಅಲ್ಲ, ಲೀಟರ್‌ಗೆ 4 ರೂ. ಹೆಚ್ಚಳ!

Public TV
2 Min Read

– ಹೇಳುವುದೊಂದು ಮಾಡುವುದು ಇನ್ನೋಂದು ಎಂದು ಜನರ ಆಕ್ರೋಶ

ರಾಯಚೂರು: ನಂದಿನಿ ಹಾಲಿನ ದರ ಹೆಚ್ಚಳ (Nandini Milk Price Hike) ಮಾಡಿರುವ ಕೆಎಂಎಫ್ (KMF) ಗ್ರಾಹಕರಿಗೆ ಬೆಲೆ ಏರಿಕೆ ಜೊತೆಗೆ ಮತ್ತೊಂದು ಶಾಕ್ ನೀಡಿದೆ. ತಾನೇ ಹೊರಡಿಸಿದ್ದ ಪರಿಷ್ಕೃತ ದರ ಪಟ್ಟಿಯನ್ನ ಕೈಬಿಟ್ಟು ಹಾಲಿನ ಪ್ಯಾಕೆಟ್ ಮೇಲೆ ಹೆಚ್ಚುವರಿ ಬೆಲೆ ಮುದ್ರಿಸಿ ಮಾರಾಟಕ್ಕೆ ಮುಂದಾಗಿದ್ದು, ಇದರ ವಿರುದ್ಧ ರಾಯಚೂರಿನಲ್ಲಿ ಗ್ರಾಹಕರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಹಾಲು ಮಾರಾಟ – ಗ್ರಾಹಕರು ದೂರು ನೀಡಿದ್ರೆ ಲೈಸನ್ಸ್ ರದ್ದು?

ಇತ್ತೀಚೆಗಷ್ಟೇ ಕೆಎಂಎಫ್‌ ನಂದಿನ ಹಾಲಿನ (KMF Nandini Milk) ದರ ಹೆಚ್ಚಿಸಿ ಪರಿಷ್ಕೃತ ದರದ ಪಟ್ಟಿಯನ್ನ ಬಿಡುಗಡೆ ಮಾಡಿತ್ತು. ಪ್ರತಿ ಲೀಟರ್‌ ಹಾಗೂ ಅರ್ಥ ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿ 50 ಎಂಎಲ್‌ ಹಾಲಿನ ಪ್ರಮಾಣ ಹೆಚ್ಚಿಸಿ 2 ರೂ. ಹೆಚ್ಚಳ ಮಾಡಿರುವುದಾಗಿ ಘೋಷಣೆ ಮಾಡಿತ್ತು. ಆದ್ರೆ ಶುಭಂ ಗೋಲ್ಡ್ ಹಾಲಿನ ದರವನ್ನು ತಾನೇ ಘೋಷಿಸಿದಂತೆ 2 ರೂ. ಹೆಚ್ಚಳ ಮಾಡುವ ಬದಲು ಅರ್ಧ ಲೀಟರ್‌ಗೆ 3 ರೂ. ಹಾಗೂ 1 ಲೀಟರ್‌ಗೆ 4 ರೂ. ಹೆಚ್ಚಳ ಮಾಡಿದೆ. ಈಗ ಬಂದಿರುವ ಹೊಸ ಪ್ಯಾಕೆಟ್‌ನಲ್ಲಿ ದುಬಾರಿ ಬೆಲೆ ಮುದ್ರಿತವಾಗಿದೆ. ಈ ಮೊದಲು ಅರ್ಧ ಲೀಟರ್‌ಗೆ 26 ರೂ. ಇದ್ದ ಶುಭಂ ಗೋಲ್ಡ್ ಹಾಲು 28 ರೂ. ಬದಲು 29 ರೂ. ಆಗಿದೆ. 1 ಲೀಟರ್‌ಗೆ 49 ರೂ. ಇದ್ದ ಹಾಲು 51 ರೂ. ಬದಲು 53 ರೂಪಾಯಿ ಆಗಿದೆ. ಹೀಗಾಗಿ ಸರ್ಕಾರ ಹೇಳುವುದೊಂದು ಮಾಡಿರುವುದು ಒಂದು ಅಂತ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ.

ಕೆಎಂಎಫ್‌ ಹೆಚ್ಚಳ ಮಾಡಿದ್ದ ದರ ಯಾವುದಕ್ಕೆ ಎಷ್ಟು?
ಟೋನ್ಡ್‌ ಹಾಲು
550 ಎಂಎಲ್‌ – 24 ರೂ.
1050 ಎಂಎಲ್‌ – 44 ರೂ.

ಹೋಮೋಜಿನೈಸ್ಡ್‌ ಟೋನ್ಡ್‌ ಹಾಲು
550 ಎಂಎಲ್‌ – 24 ರೂ.
1050 ಎಂಎಲ್‌ – 45 ರೂ.

ಹೋಮೋಜಿನೈಸ್ಡ್‌ ಹಸುವಿನ ಹಾಲು
550 ಎಂಎಲ್‌ – 26 ರೂ.
1050 ಎಂಎಲ್‌ – 48 ರೂ.

ಸ್ಪೆಷಲ್‌ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 50 ರೂ.

ಶುಭಂ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 50 ರೂ.

ಸಮೃದ್ಧಿ ಹಾಲು
550 ಎಂಎಲ್‌ – 28 ರೂ.
1050 ಎಂಎಲ್‌ – 53 ರೂ.

ಹೋಮೋಜಿನೈಸ್ಡ್‌ ಶುಭಂ ಹಾಲು
550 ಎಂಎಲ್‌ – 27 ರೂ.
1050 ಎಂಎಲ್‌ – 51 ರೂ.

ಸತೃಪ್ತಿ ಹಾಲು
550 ಎಂಎಲ್‌ – 30 ರೂ.
1050 ಎಂಎಲ್‌ – 57 ರೂ.

ಶುಭಂ ಗೋಲ್ಡ್‌ ಹಾಲು
550 ಎಂಎಲ್‌ – 28 ರೂ.
1050 ಎಂಎಲ್‌ – 51 ರೂ.

ಡಬಲ್‌ ಟೋನ್ಡ್‌ ಹಾಲು
550 ಎಂಎಲ್‌ – 23 ರೂ.
1050 ಎಂಎಲ್‌ – 43 ರೂ.

Share This Article