ದರ್ಶನ್‌ ಪ್ರಕರಣ: ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತೆ- ಶಿವಣ್ಣ ಫಸ್ಟ್‌ ರಿಯಾಕ್ಷನ್

Public TV
1 Min Read

ನ್ನಡದ ಖ್ಯಾತ ನಟ ದರ್ಶನ್ (Darshan) ಸದ್ಯ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ಅರೆಸ್ಟ್ ಆಗಿದ್ದಾರೆ. ಇದೀಗ ದರ್ಶನ್ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಅಣ್ಣಾವ್ರ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ: ಸಿಎಂ

ನಟ ಶಿವರಾಜ್‌ಕುಮಾರ್ (Shivarajkumar) ಮಾತನಾಡಿ, ಏನು ಮಾಡೋಕೆ ಆಗಲ್ಲ ಹಣೆ ಬರಹ ಅಂತ ಬಂದಾಗ ನಾವು ಏನೇ ಮಾತನಾಡೋಕೆ ಹೋದರು ತಪ್ಪಾಗುತ್ತದೆ ಎಂದಿದ್ದಾರೆ. ಈ ಘಟನೆಯ ಬಗ್ಗೆ ಬೇಸರ ಆಗುತ್ತದೆ. ಹಣೆಬರಹದಲ್ಲಿ ಏನಿದೆಯೋ ಅದೇ ಆಗುತ್ತದೆ. ಈ ಘಟನೆಯಿಂದ ರೇಣುಕಾಸ್ವಾಮಿ ಮತ್ತು ದರ್ಶನ್ ಫ್ಯಾಮಿಲಿಗೂ ನೋವಾಗಿರುತ್ತದೆ. ನಾವು ಎಂದಿಗೂ ನ್ಯಾಯಕ್ಕೆ ತಲೆ ಬಾಗಲೇಬೇಕು ಎಂದಿದ್ದಾರೆ.

ಅಂದಹಾಗೆ, ಜೂನ್ 29ರಂದು ನಟಿ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ದಂಪತಿ ಜೈಲಿಗೆ ಆಗಮಿಸಿ ದರ್ಶನ್‌ರನ್ನು ಭೇಟಿ ಮಾಡಿದ್ದರು.

Share This Article