ಟಿ20 ವಿಶ್ವಕಪ್‌ ಫೈನಲ್‌ ಮ್ಯಾಚ್‌; ಟೀಂ ಇಂಡಿಯಾ ಗೆಲುವಿಗೆ ಕರ್ನಾಟಕದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

Public TV
1 Min Read

– ಸಮುದ್ರದ ಮರಳಿನಲ್ಲಿ ಅರಳಿದ ‘ಜೈ ಹೋ ಇಂಡಿಯಾ’ ಕಲಾಕೃತಿ

ಬೆಂಗಳೂರು: ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ತಂಡಗಳ ಸೆಣೆಸಾಟ ನೋಡಲು ಕ್ರಿಕೆಟ್‌ ಅಭಿಮಾನಿಗಳು ಕಾತರರಾಗಿದ್ದಾರೆ. ಈ ಬಾರಿ ಫೈನಲ್‌ ಪ್ರವೇಶಿಸಿರುವ ಭಾರತ ತಂಡದ ಗೆಲುವಿಗಾಗಿ ದೇಶಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.

ಭಾರತ ತಂಡ ಗೆಲ್ಲಲಿ ಎಂದು ಬೆಂಗಳೂರಿನ (Bengaluru) ದೇಗುಲದಲ್ಲಿ ವಿಶೇಷ ಹೋಮ-ಹವನ ಮಾಡಿಸಲಾಗಿದೆ. ರಾಜರಾಜೇಶ್ವರಿ ನಗರದ ನಿಮಿಷಾಂಬ ದೇಗುಲದಲ್ಲಿ ಅಭಿಷ್ಟ ಸಿದ್ದಿ ಪೂಜೆ ಮಾಡಲಾಗಿದೆ. ಪ್ರತಿ ನಿಮಿಷವೂ ಶುಭವಾಗಲಿ ಹಾಗೂ ಗೆಲ್ಲಬೇಕೆಂಬ ಅಭಿಲಾಷೆಯಿಂದ ಅಭಿಷ್ಟ ಸಿದ್ದಿ ಹೋಮ ಮಾಡಿಸಿರುವ ಕನ್ನಡಿಗರು, ಟೀಂ ಇಂಡಿಯಾ ಆಟಗಾರರ ಮೇಲೆ ದೇವಿಯ ಬೆಂಬಲ ಇರಲಿ ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಇಂದು ಟಿ-20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ; ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ಭಾರತ ಹಣಾಹಣಿ

ನಗರದ ಗಾಳಿ ಆಂಜನೇಯನಿಗೆ ವಿಶೇಷ ಅಭಿಷೇಕ ಕೂಡ ಮಾಡಿಸಲಾಗಿದೆ. ಆಂಜನೇಯನಿಗೆ ಹೂವು ಹಾಕಿ ವಿಕೆಟ್, ಬಾಲ್, ಬ್ಯಾಟ್‌ಗೆ ಪೂಜೆ ಸಲ್ಲಿಸಲಾಗಿದೆ. ತೆಂಗಿನಕಾಯಿ ಒಡೆದು, ಹೂವಿನ ಅಭಿಷೇಕ ಮಾಡಿ ತಂಡದ ಗೆಲುವಿಗೆ ಪ್ರಾರ್ಥಿಸಲಾಗಿದೆ.

ಮಂಡ್ಯ ನಗರದ ಶನೇಶ್ವರ ದೇವಾಲಯದಲ್ಲಿ ಕೂಡ ಪೂಜೆ ಸಲ್ಲಿಕೆಯಾಗಿದೆ. ತಂಡದ ಆಟಗಾರರ ಹೆಸರಿನಲ್ಲಿ ಅರ್ಚನೆ ಕೂಡ ಮಾಡಿಸಲಾಗಿದೆ. ಇತ್ತ ಉಡುಪಿಯ ಕುಂದಾಪುರದ ಕೋಟೇಶ್ವರದಲ್ಲಿ ಬೀಚ್‌ ‘ಜೈ ಹೋ ಇಂಡಿಯಾ’ ಎಂದು ಸ್ಯಾಂಡ್ ಆರ್ಟ್ ಕಲಾಕೃತಿ ರಚಿಸಿದ್ದಾರೆ. ಉಡುಪಿಯ ಸ್ಯಾಂಡ್ ಆರ್ಟ್ ಟೀಂ ನಿಂದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಗೆದ್ದು ಬಾ ಟೀಂ ಇಂಡಿಯಾ – 2014 ರಿಂದ 2023ವರೆಗೆ ಐಸಿಸಿ ಟೂರ್ನಿಯಲ್ಲಿ ಭಾರತ ಸಾಧನೆ ಏನು?

ದಾವಣಗೆರೆಯಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಮಕ್ಕಳು ಕೂಡ ಭಾರತ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಆಲ್‌ ದಿ ಬೆಸ್ಟ್‌ ಇಂಡಿಯಾ ಅಂತಾ ಕ್ರಿಕೆಟ್‌ ಅಭಿಮಾನಿಗಳೂ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.

Share This Article