ಪ್ರಜ್ವಲ್ ಬಳಿ ಇತ್ತಂತೆ 15 ಸಿಮ್- ಸಂತ್ರಸ್ತೆಯರಿಗೆ ನಗ್ನರಾಗುವಂತೆ ಬೆದರಿಕೆ!

By
1 Min Read

ಹಾಸನ: ಜೈಲಿನಲ್ಲಿರುವ ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಒಂದೊಂದೇ ಕೃತ್ಯಗಳು ಬಯಲಿಗೆ ಬರುತ್ತಿವೆ.

ಪ್ರಜ್ವಲ್ ರೇವಣ್ಣ ಬಳಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಿಮ್‍ಗಳು ಇತ್ತಂತೆ. ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್. ಹೀಗೆ ಪ್ರಜ್ವಲ್ ರೇವಣ್ಣ ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್. ಕೆಲಸ ಕೇಳಿಕೊಂಡು, ಮಕ್ಕಳಿಗೆ ಸೀಟ್ ಕೇಳಿಕೊಂಡು ಬಂದವರ ಮೇಲೂ ಕಣ್ಣು ಹಾಕಿದ್ದ. ಅವರ ಬಳಿ ಫೋನ್ ನಂಬರ್ ಪಡೆದು ಪದೇ ಪದೇ ಕಾಲ್ ಮಾಡುತ್ತಿದ್ದ. ಕ್ರಮೇಣ ಅವರೊಂದಿಗೆ ಸಲುಗೆ ಬೆಳೆಸಿ ಕರೆ ಮಾಡುತ್ತಿದ್ದ. ನಂತರ ವೀಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಬೆದರಿಕೆ ಹಾಕುತ್ತಿದ್ದ. ಇದನ್ನೂ ಓದಿ: ರ್ಶನ್ ಖೈದಿ 6106 ನಂಬರ್ ಟ್ರೆಂಡಿಂಗ್- ಮೊಬೈಲ್, ವಾಹನದ ಮೇಲೂ ಇದೇ ಸ್ಟಿಕ್ಕರ್

ಇಷ್ಟು ಮಾತ್ರವಲ್ಲದೇ ನನ್ನೊಂದಿಗೆ ಸಹಕರಿಸದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಬೆದರಿಕೆಗೆ ಹೆದರಿ ನಗ್ನರಾಗಿರುವುದಾಗಿ ಇತ್ತೀಚಿಗೆ ಸಂತ್ರಸ್ತೆಯೊಬ್ಬರು ಕೊಟ್ಟ ದೂರಿನಲ್ಲಿ ಪ್ರಜ್ವಲ್ ಕರಾಳಮುಖ ಬಯಲು ಮಾಡಿದ್ದಾರೆ.

Share This Article