ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ- ಶ್ರುತಿ

Public TV
1 Min Read

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ (Renukaswamy Murder Case) ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ, ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ ಎಂದು ಹಿರಿಯ ನಟಿ ಶ್ರುತಿ (Actress Shruthi) ಮಾತನಾಡಿದ್ದಾರೆ. ಇದನ್ನೂ ಓದಿ:‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್- ಮೊದಲ ಶೋಗೆ ಉತ್ತಮ ರೆಸ್ಪಾನ್ಸ್

ದರ್ಶನ್ ಅರೆಸ್ಟ್ ವಿಷ್ಯವಾಗಿ ನಟಿ ಶ್ರುತಿ ಪ್ರತಿಕ್ರಿಯಿಸಿ, ಇದನ್ನು ಯಾರು ಕೂಡ ಊಹೆ ಮಾಡಿರಲಿಲ್ಲ. ಈ ಪ್ರಕರಣ ಎರಡು ಫ್ಯಾಮಿಲಿ ಸಂಬಂಧಿಸಿದ್ದು ಮಾತ್ರವಲ್ಲ. ಇದರಿಂದ ಇಡೀ ಫ್ಯಾಮಿಲಿ ಮಂಕಾಗಿದೆ ಎಂದರು. ‘ಕಾಟೇರ’ (Kaatera) ಸಿನಿಮಾದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡೋ ಅವಕಾಶ ಸಿಗುವ ಮುನ್ನ ‘ಎಲ್ಲರ ಮನೆ ದೋಸೆ ತೂತು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೇವೆ ಎಂದರು. ನನ್ನ ಕೊನೆಯ ತಮ್ಮನ ಪಾತ್ರದಲ್ಲಿ ದರ್ಶನ್ ನಟಿಸಿದ್ದರು. ದರ್ಶನ್ ಸರಳ ವ್ಯಕ್ತಿತ್ವ ಹೊಂದಿರುವವರು ಎಂದು ನಟಿ ಮಾತನಾಡಿದ್ದಾರೆ.

ದರ್ಶನ್ ಕಷ್ಟದಿಂದ ಬಂದು ಚಿತ್ರರಂಗದಲ್ಲಿ ಬೆಳೆದವರು. ಪ್ರತಿ ಸಿನಿಮಾಗೂ ದರ್ಶನ್ ಹಾರ್ಡ್ ವರ್ಕ್ ಮಾಡುತ್ತಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಎನ್ನುವ ಅರಿವಿದೆ. ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡುತ್ತಿದ್ದರು. ಇಂತಹ ಪ್ರಕರಣದಲ್ಲಿ ದರ್ಶನ್ ಸಿಲುಕಿದ ವಿಚಾರ ಕೇಳಿ ಶಾಕ್ ಆಯ್ತು. ಇದಕ್ಕೆಲ್ಲಾ ತಾರ್ಕಿಕ ಅಂತ್ಯ ಸಿಗಬೇಕು ಎಂದು ಶ್ರುತಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಇದರಿಂದ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ನನಗೂ ಕೂಡ ಕೆಲ ಕಾಮೆಂಟ್ ಬಂದಿದೆ. ಅದರಿಂದ ಆಚೆ ಬರೋಕೆ ತುಂಬಾ ಕಷ್ಟ ಆಗುತ್ತೆ ಎಂದು ನಟಿ ಮಾತನಾಡಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ಹಾದಿಯನ್ನು ನೋಡಿದರೆ ದರ್ಶನ್ ದುಡುಕಿದ್ರು ಅನಿಸುತ್ತದೆ. ಸದ್ಯ ವಿಚಾರಣೆ ನಡೆಯುತ್ತದೆ. ಏನಾಗಲಿದೆ ಎಂದು ಕಾದುನೋಡೋಣ. ನೊಂದ ಕುಟುಂಬಕ್ಕೂ ನ್ಯಾಯ ಸಿಗಬೇಕು ಎಂದು ಕಾಟೇರ ನಟಿ ಶ್ರುತಿ ಮಾತನಾಡಿದ್ದಾರೆ.

Share This Article