ಪತಿ ಜೊತೆಗಿನ ರೊಮ್ಯಾಂಟಿಕ್‌ ಫೋಟೋ ಹಂಚಿಕೊಂಡ ಆಲಿಯಾ ಭಟ್

By
1 Min Read

ಅಂಬಾನಿ ಮನೆ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಈ ಇವೆಂಟ್‌ನಲ್ಲಿ ಆಲಿಯಾ, ರಣ್‌ಬೀರ್ ಕಪೂರ್ (Ranbir Kapoor) ಕೂಡ ಭಾಗಿಯಾಗಿದ್ರು. ಇಬ್ಬರೂ ಕಾರ್ಯಕ್ರಮದಲ್ಲಿ ಮಿಂಚಿದ್ದು ಹೇಗೆ ಎಂದು ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ.‌ ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್‌- ಆಯುಷ್ಮಾನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

ಅನಂತ್ ಅಂಬಾನಿ ಮನೆ ಕಾರ್ಯಕ್ರಮಕ್ಕೆ ಮಗಳು ರಾಹಾ ಜೊತೆ ಆಲಿಯಾ (Alia Bhatt) ದಂಪತಿ ಹಾಜರಿ ಹಾಕಿದ್ದರು. ಕಪ್ಪು ಪ್ಯಾಂಟ್, ವೈಟ್ ಶರ್ಟ್‌ಗೆ ನೇರಳೆ ಬಣ್ಣದ ಕೋಟ್ ಅನ್ನು ರಣ್‌ಬೀರ್ ಧರಿಸಿದ್ರೆ, ಆಲಿಯಾ ಲೈಟ್ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇದೀಗ ತಡವಾಗಿ ಕಾರ್ಯಕ್ರಮದ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ.

ಇನ್ನೂ ಆಲಿಯಾ ಮತ್ತು ರಣ್‌ಬೀರ್ ಇಬ್ಬರೂ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ, ಅನಿಮಲ್ 2 ಸೇರಿದಂತೆ ಹಲವು ಚಿತ್ರಗಳು ರಣ್‌ಬೀರ್ ಕೈಯಲ್ಲಿವೆ. ಇದನ್ನೂ ಓದಿ:Darshan: ‘ಡೆವಿಲ್’ ಸಿನಿಮಾ ಕೈತಪ್ಪಿದರೆ ನಿಜಕ್ಕೂ ಬೇಸರ ಆಗುತ್ತೆ- ವಿನಯ್ ಗೌಡ

ಸಿನಿಮಾದ ಜೊತೆಗೆ ನಿರ್ಮಾಪಕಿಯಾಗಿ ಆಲಿಯಾ ಭಟ್ ಗುರುತಿಸಿಕೊಳ್ತಿದ್ದಾರೆ. ಸಿನಿಮಾ ಕೆಲಸ ಮತ್ತು ರಾಹಾ ಆರೈಕೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.

Share This Article