ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವು – ಪುಣೆ ಶಾಸಕನ ಸೋದರಳಿಯ ಅರೆಸ್ಟ್‌

Public TV
1 Min Read

ಮುಂಬೈ: ಪುಣೆ-ನಾಸಿಕ್ (Pune) ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ (Maharashtra) ಶಾಸಕರೊಬ್ಬರ ಸೋದರಳಿಯನ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 19 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಯೂರ್ ಮೋಹಿತೆಯನ್ನು ಬಂಧಿಸಿದ್ದಾರೆ. ಮಯೂರ್‌ ಮೋಹಿತೆ, ಪುಣೆ ಜಿಲ್ಲೆಯ ಖೇಡ್ ಅಲಂದಿ ವಿಧಾನಸಭಾ ಕ್ಷೇತ್ರದ ಶಾಸಕ ದಿಲೀಪ್ ಮೋಹಿತೆ ಪಾಟೀಲ್ ಅವರ ಸೋದರಳಿಯ. ದಿಲೀಪ್ ಮೋಹಿತೆ ಪಾಟೀಲ್ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿಯೊಂದಿಗೆ ಸರಸ – ಹೋಟೆಲ್‌ನಲ್ಲಿ ಸಿಕ್ಕಿಬಿದ್ದ DSPಗೆ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ!

ಅಪಘಾತದಲ್ಲಿ ಮೃತಪಟ್ಟವರು ಓಂ ಭಲೇರಾವ್ ಎಂದು ಗುರುತಿಸಲಾಗಿದೆ. ಮಯೂರ್ ಮೋಹಿತೆ ಚಲಾಯಿಸುತ್ತಿದ್ದ ಟೊಯೊಟಾ ಫಾರ್ಚುನರ್ ಎಸ್‌ಯುವಿ ರಾಂಗ್ ಸೈಡ್‌ನಿಂದ ಬರುತ್ತಿತ್ತು. ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನನ್ನ ಸೋದರಳಿಯ ಸ್ಥಳದಿಂದ ಓಡಿಹೋಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅವರು ನಶೆಯಲ್ಲಿಲ್ಲ ಎಂದು ಶಾಸಕ ದಿಲೀಪ್‌ ಮೋಹಿತೆ ಪಾಟೀಲ್‌ ಹೇಳಿದ್ದಾರೆ. ಇದನ್ನೂ ಓದಿ: ನೀಟ್‌, ನೆಟ್‌ ಪರೀಕ್ಷೆಯಲ್ಲಿ ಅಕ್ರಮ – ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮುಖ್ಯಸ್ಥ ವಜಾ

ಪುಣೆಯಲ್ಲಿ ರ‍್ಯಾಶ್‌ ಡ್ರೈವಿಂಗ್‌ನಿಂದ ಸಂಭವಿಸಿದ ಮತ್ತೊಂದು ಅಪಘಾತ ಇದಾಗಿದ್ದು, ದೇಶದ ಗಮನ ಸೆಳೆದಿದೆ. ಕಳೆದ ತಿಂಗಳು, ಪ್ರಮುಖ ಉದ್ಯಮಿಯ 17 ವರ್ಷದ ಮಗ ಚಾಲನೆ ಮಾಡುತ್ತಿದ್ದ ಪೋರ್ಶೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದು 24 ವರ್ಷದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವನ್ನಪ್ಪಿದ್ದರು.

ಕುಡಿದು ವಾಹನ ಚಲಾಯಿಸುತ್ತಿದ್ದ ಹದಿಹರೆಯದ ಆರೋಪಿ, ಅಪಘಾತವಾದ 15 ಗಂಟೆಗಳ ಒಳಗೆ ಜಾಮೀನಿನ ಮೇಲೆ ಹೊರಬಂದಿದ್ದ. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮವಾಗಿ ಬಾಲ ನ್ಯಾಯ ಮಂಡಳಿಯು ತನ್ನ ಆದೇಶವನ್ನು ಹಿಂಪಡೆಯಿತು.

Share This Article