ದರ್ಶನ್ ಪ್ರಕರಣದ ಬಗ್ಗೆ ಶ್ರೀಲೀಲಾ ಹೇಳಿದ್ದೇನು?

Public TV
1 Min Read

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಸದ್ಯ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದ ಕುರಿತು ಸುದೀಪ್, ಉಪೇಂದ್ರ, ರಮ್ಯಾ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೆ ಕನ್ನಡದ ನಟಿ ಶ್ರೀಲೀಲಾ (Sreeleela) ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:‘ಕಲ್ಕಿ’ ಇವೆಂಟ್‌ಗೆ 1,14,000 ಮೌಲ್ಯದ ಡ್ರೆಸ್ ಧರಿಸಿ ಬಂದ ದೀಪಿಕಾ ಪಡುಕೋಣೆ

ಬಳ್ಳಾರಿಯಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿಂದು ಸಿಎಂ ಸಿದ್ದರಾಮಯ್ಯ ಜೊತೆ ನಟಿ ಶ್ರೀಲೀಲಾ ಕೂಡ ಭಾಗಿಯಾಗಿ ಯೋಗ ಪ್ರದರ್ಶನ ಮಾಡಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಲೀಲಾಗೆ ದರ್ಶನ್ ಪ್ರಕರಣ ಬಗ್ಗೆ ಪ್ರಶ್ನೆ ಎದುರಾಯಿತು. ಈ ವೇಳೆ, ಉತ್ತರಿಸೋಕೆ ನಿರಾಕರಿಸಿದ್ದಾರೆ. ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ.

ಸದ್ಯ ಶ್ರೀಲೀಲಾ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ನಟ ನಿತಿನ್ ಜೊತೆ ಸಿನಿಮಾ, ರವಿತೇಜ ಜೊತೆ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ಪುತ್ರನಿಗೂ ಶ್ರೀಲೀಲಾ ನಾಯಕಿಯಾಗಿದ್ದಾರೆ. ಕನ್ನಡಲ್ಲಿ ‘ಜ್ಯೂನಿಯರ್’ ಎಂಬ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಬಿಡುಗಡೆ ದಿನಾಂಕ ಇನ್ನೂ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.

ಕನ್ನಡದ `ಕಿಸ್’ ಸಿನಿಮಾ ಮೂಲಕ ಶ್ರೀಲೀಲಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈಗ ಪರಭಾಷೆಯಲ್ಲಿ ನಟಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

Share This Article