‘ಬಿಗ್ ಬಾಸ್’ ಪ್ರಥಮ್‌ಗೆ ಬೆದರಿಕೆ ಕರೆ- ದೂರು ದಾಖಲಿಸಿದ ನಟ

By
1 Min Read

ʻಅಂಧಾಭಿಮಾನಿಗಳೇ ಯಾರಿಗೋಸ್ಕರವೋ ಜೀವನ ಹಾಳುಮಾಡಿಕೊಳ್ಳಬೇಡಿʼ

‘ಬಿಗ್ ಬಾಸ್’ ಕನ್ನಡ 4’ರ (Bigg Boss Kannada 4) ವಿನ್ನರ್ ಪ್ರಥಮ್‌ಗೆ ( Actor Pratham) ಕೆಲ ಕಿಡಿಗೇಡಿಗಳಿಂದ ನಿರಂತರ ಕರೆ ಬಂದ ಬೆನ್ನಲ್ಲೇ ಠಾಣೆ ಮೆಟ್ಟಿಲೇರಿದ್ದಾರೆ. ಬೆದರಿಕೆ ಕರೆ ಮಾಡಿದವರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದಾರೆ.

ಅಂಧಾಭಿಮಾನಿಗಳಿಂದ ನಿರಂತರ ಕರೆಗಳು ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಪ್ರಥಮ್ ದೂರು ನೀಡಿದ್ದಾರೆ. ಬಳಿಕ ದೂರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಥಮ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡಿಗನ ಕಥೆಯಲ್ಲಿ ಅಕ್ಷಯ್ ಕುಮಾರ್- ‘ಸರ್ಫಿರಾ’ ಟ್ರೈಲರ್ ಔಟ್

ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ, ನೀವು ಅತಿಯಾಗಿ ನಮ್ಮ ಕರ್ನಾಟಕ ಅಳಿಯ ತಂಡದ ಆಫೀಸ್ ನಂಬರ್‌ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೇ ಬಂದಿದ್ದೀರಾ. ಇನ್ಮೇಲೆ ನನಗೆ ಬರುವ ಕಾಲ್ ಮತ್ತು ಮೆಸೇಜ್ ಸೋಷಿಯಲ್ ಮೀಡಿಯಾ ವಾರ್ನಿಂಗ್ಸ್ ಎಲ್ಲವೂ ಪೊಲೀಸರೇ ನೋಡಿಕೊಳ್ತಾರೆ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗೆ ಮೀಸಲಿಡಿ. ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ. ಆದರೆ ಯಾರಿಗೋಸ್ಕರವೋ ಲೈಫು ಹಾಳುಮಾಡಿಕೊಳ್ಳಬೇಡಿ ಎಂದು ಪ್ರಥಮ್ ಹೇಳಿದ್ದಾರೆ.

Share This Article