NIA ದಾಳಿ- ಶಿರಸಿಯ ಅಬ್ದುಲ್ ಶುಕ್ಕೂರ್ ಮೇಲಿದೆ ಶಿವಮೊಗ್ಗ ಸ್ಫೋಟದ ಸಂಚಿನ ಆರೋಪ

Public TV
1 Min Read

ಕಾರವಾರ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ NIA ತಂಡದಿಂದ ದಾಳಿ ನಡೆದಿದ್ದು, ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಿನ್ನೆಲೆಯಲ್ಲಿ ಬನವಾಸಿಯ ದಾಸನ ಕೊಪ್ಪ ಮೂಲದ ಅಬ್ದುಲ್ ಶುಕ್ಕೂರ್ (32) ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ಇಂದು ಬೆಳಗ್ಗೆ 5 ಮಂದಿ ಅಧಿಕಾರಿಗಳಿರುವ NIA ತಂಡ ಹಾಗೂ ರಾಜ್ಯದ ಇಂಟೆಲಿಜೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ರಾಮೇಶ್ವರಂ ಕೆಫೆ ಬ್ಲಾಸ್ಟ್, ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾಗಿ ಆರೋಪ ಈತನ ಮೇಲಿದೆ. ಇದನ್ನೂ ಓದಿ: ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣ – 25,000 ಕೋಟಿ ರೂ. ಕಳೆದುಕೊಂಡ ಭಾರತೀಯರು

ಇದಲ್ಲದೇ ಶಿವಮೊಗ್ಗದಲ್ಲಿ (Shivamogga) ಮಸೀದಿ ಹಾಗೂ ಇತರ ಪ್ರದೇಶಗಳಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಗಳಿಗೆ ಪ್ರಚೋದನೆ ನೀಡಿರುವ ಆರೋಪ‌ ಹೊಂದಿರುವ ಅಬ್ದುಲ್ ಶುಕ್ಕೂರ್ ದುಬೈ ನಲ್ಲಿ ಕೆಲಸ ಮಾಡುತ್ತಿದ್ದಾನೆ. ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನಾಗಿದ್ದಾನೆ ಎಂಬ ಆರೋಪ ಈತನ ಮೇಲಿದೆ.

ಕೆಲವು ದಿನದ ಹಿಂದೆ ಬಕ್ರೀದ್ ಆಚರಣೆಗಾಗಿ ಬನವಾಸಿಯ ದಾಸನ ಕೊಪ್ಪದ ನಿವಾಸಕ್ಕೆ ಆಗಮಿಸಿದ್ದ ಅಬ್ದುಲ್ ಶುಕ್ಕೂರ್ ನನ್ನು ಆನ್ ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್ ನಲ್ಲಿ ನಕಲಿ ದಾಖಲೆ ನೀಡಿದ ಆರೋಪದಡಿ NIA ತನಿಖೆ ಕೈಗೊಂಡಿದೆ.

Share This Article