ಹಾಸನದಲ್ಲಿ ಕಾಣಿಸಿಕೊಂಡ ನೀಲಿ ತಾರೆ- ಶೂಟಿಂಗ್‌ನಲ್ಲಿ ಸನ್ನಿ ಲಿಯೋನ್ ಭಾಗಿ

Public TV
1 Min Read

ಬಾಲಿವುಡ್ (Bollywood) ಬೆಡಗಿ ಸನ್ನಿ ಲಿಯೋನ್‌ಗೆ (Sunny Leone) ಕರ್ನಾಟಕವೇನು ಹೊಸದಲ್ಲ. ಈಗಾಗಲೇ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಸಿನಿಮಾ ಪ್ರಚಾರ ಕಾರ್ಯಕ್ಕೂ ಚಿತ್ರತಂಡಕ್ಕೆ ಸಾಥ್‌ ನೀಡಿದ್ದು ಇದೆ. ಆದರೆ ಈಗ ತಮಿಳು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಕಬ್ಬಳಿ ಗ್ರಾಮದಲ್ಲಿ ಸನ್ನಿ ಲಿಯೋನ್ ಭಾಗಿಯಾಗಿದ್ದಾರೆ.

ಕಬ್ಬಳಿ ಗ್ರಾಮಕ್ಕೆ ಆಗಮಿಸಿದ ಸನ್ನಿ, ಶಾಲೆಯಲ್ಲಿ ಶೂಟಿಂಗ್ ನಡೆಸಿದ್ದಾರೆ. ಬಳಿಕ ತರಗತಿಗೂ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ನಟಿ ಕಾಲ ಕಳೆದಿದ್ದಾರೆ. ಇದೇ ವೇಳೆ, ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಪ್ಪು ಬಣ್ಣ ಟೀ ಶರ್ಟ್ ಮತ್ತು ಪ್ಯಾಂಟ್‌ಗೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದಾರೆ. ಇದನ್ನೂ ಓದಿ:ಲಂಡನ್‌ನತ್ತ ‘ಟಾಕ್ಸಿಕ್’ ಟೀಮ್- 150ಕ್ಕೂ ಹೆಚ್ಚು ದಿನ ಶೂಟಿಂಗ್‌ಗೆ ಯಶ್ ಪ್ಲ್ಯಾನ್

ಅಂದಹಾಗೆ, ‘ಕೊಟೇಶನ್ ಗ್ಯಾಂಗ್’ ಚಿತ್ರದ ಬಹುತೇಕ ಚಿತ್ರೀಕರಣ ಕರ್ನಾಟಕದಲ್ಲಿ ಪೂರ್ಣಗೊಂಡಿದೆ. ಈ ವೇಳೆ, ಸಾಕಷ್ಟು ಅಭಿಮಾನಿಗಳು ಸನ್ನಿ ಲಿಯೋನ್ ಅವರನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

‘ಕೊಟೇಶನ್ ಗ್ಯಾಂಗ್’ (Quotation Gang) ಸಿನಿಮಾದಲ್ಲಿ ಸನ್ನಿ ಜೊತೆ ಜಾಕಿ ಶ್ರಾಫ್, ಪ್ರಿಯಾ ಮಣಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.

Share This Article