ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಹೆಚ್‌ಡಿಕೆ

Public TV
1 Min Read

ಮಂಡ್ಯ: ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಇಂದು ಮಂಡ್ಯದ (Mandya) ಆದಿಚುಂಚನಗಿರಿಗೆ ತೆರಳಿ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಆದಿಚುಂಚನಗಿರಿಗೆ ಇಂದು ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪೂರ್ಣ ಕುಂಭ ಹಾಗೂ ಮಂಗಳ ವಾದ್ಯಗಳ ಮೂಲಕ ಸ್ವಾಗತಿಸಲಾಯಿತು. ಬಳಿಕ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಅವರು ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ದರ್ಶನ್‍ನಂತೆ ರಾಜಕಾರಣಿಗಳೂ ನಿರ್ಧಾರ ತಗೊಳೋದಾದ್ರೆ ಗಂಟೆಗೊಂದು ಹೆಣ ಬೀಳ್ತಿತ್ತು: ಸಿ.ಟಿ ರವಿ ಖಂಡನೆ

ಬಳಿಕ ಮಠಕ್ಕೆ ತೆರಳಿದ ಹೆಚ್‌ಡಿಕೆ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭ ಕುಮಾರಸ್ವಾಮಿ ಅವರಿಗೆ ಶ್ರೀಗಳು ಆಶೀರ್ವಾದ ನೀಡಿ ಶುಭಕೋರಿದರು. ಕುಮಾರಸ್ವಾಮಿಗೆ ಮಾಜಿ ಸಚಿವ ಪುಟ್ಟರಾಜು, ಮಾಜಿ ಶಾಸಕ ಸುರೇಶ್‌ಗೌಡ ಹಾಗೂ ಜೆಡಿಎಸ್ ಬಿಜೆಪಿ ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಸ್ವಾಮಿ ಶವ ಎಸೆಯೋ ಬಗ್ಗೆ ದರ್ಶನ್ ಮನೆಯಲ್ಲೇ ನಡೆದಿತ್ತು ಸ್ಕೆಚ್!

Share This Article