ಮೋದಿ ಸಂಪುಟದಲ್ಲಿ ಟಿಡಿಪಿಗೆ 3, ಜೆಡಿಯುಗೆ 2 ಸಚಿವ ಸ್ಥಾನ? – NDA ಕೂಟದ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

By
1 Min Read

ನವದೆಹಲಿ: ಎನ್‌ಡಿಎ ಮೈತ್ರಿಕೂಟದ ನಾಯಕ ನರೇಂದ್ರ ಮೋದಿ ಅವರು ಭಾನುವಾರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ನೂತನ ಸಂಪುಟದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ 3 ಹಾಗೂ ಜೆಡಿಯು ಎರಡು ಖಾತೆಗಳನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಪೀಕರ್‌ ಸೇರಿ ಆರು ಸ್ಥಾನಗಳಿಗೆ ಟಿಡಿಪಿ ಬೇಡಿಕೆ ಇಟ್ಟಿತ್ತು. ಆದರೆ ಮಾತುಕತೆ ಮೂಲಕ ಒಪ್ಪಿಗೆ ಪಡೆದು ಮೂರು ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಟಿಡಿಪಿಯ ರಾಮ್ ಮೋಹನ್ ನಾಯ್ಡು, ಹರೀಶ್ ಬಾಲಯೋಗಿ ಮತ್ತು ದಗ್ಗುಮಲ್ಲ ಪ್ರಸಾದ್ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಿತೀಶ್‌ ಕುಮಾರ್‌ಗೆ ‘ಇಂಡಿಯಾ’ ಒಕ್ಕೂಟ ಪ್ರಧಾನಿ ಸ್ಥಾನದ ಆಫರ್‌ ನೀಡಿತ್ತು: ಜೆಡಿಯು ನಾಯಕನ ಸ್ಫೋಟಕ ಹೇಳಿಕೆ

ಜೆಡಿಯುಗೆ ಎರಡು ಸ್ಥಾನ ನೀಡಲು ನಿರ್ಧಾರಿಸಲಾಗಿದೆ. ಲಾಲನ್ ಸಿಂಗ್ ಮತ್ತು ರಾಮನಾಥ್ ಠಾಕೂರ್‌ಗೆ ಮಂತ್ರಿ ಸ್ಥಾನ ಸಿಗಲಿದೆ. ಶಿವಸೇನೆ ಮತ್ತು ಎಲ್‌ಜೆಪಿ(ಆರ್)ನಿಂದ ತಲಾ ಒಬ್ಬರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿಹಾರದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಮತ್ತು ಎಲ್‌ಜೆಪಿ (ಆರ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ. ಆರ್‌ಎಲ್‌ಡಿ ನಾಯಕ ಜಯಂತ್ ಚೌಧ್ರಿಗೂ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಜೂ.12 ರಂದು ಆಂಧ್ರ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ

Share This Article