ಜನರ ಜ್ವಲಂತ ಸಮಸ್ಯೆ ಎತ್ತಿರೋ ರಾಹುಲ್‌ ಗಾಂಧಿಯವ್ರೇ ಪ್ರತಿಪಕ್ಷ ನಾಯಕನಾಗಲಿ: ಪರಂ

By
1 Min Read

ಬೆಂಗಳೂರು: ದೇಶಾದ್ಯಂತ ಪಾದಯಾತ್ರೆ ಮಾಡಿ ಜನರ ಜ್ವಲಂತ ಸಮಸ್ಯೆ ಎತ್ತಿರೋ ರಾಹುಲ್‌ ಗಾಂಧಿಯವ್ರೇ (Rahul Gandhi) ಪ್ರತಿಪಕ್ಷ ನಾಯನಕನಾಗಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Dr G Parameshwar) ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರೇ ಪ್ರತಿಪಕ್ಷ ಆಗಲಿ ಅಂತ ನಮ್ಮೆಲ್ಲರ ಆಸೆ. ಇದನ್ನು ಇಂಡಿಯಾ ಒಕ್ಕೂಟ ತೀರ್ಮಾನಿಸಲಿದೆ. ರಾಹುಲ್ ಗಾಂಧಿ ದೇಶಾದ್ಯಂತ ಪಾದಯಾತ್ರೆ ಮಾಡಿದ್ದಾರೆ. ಈ ಮೂಲಕ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿದ್ದಾರೆ. ಹೀಗಾಗಿ ಅವರೇ ಪ್ರತಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಬಯಕೆಯಾಗಿದೆ. ಇಂಡಿಯಾ ಕೂಟ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಹೇಳಿದರು.

ಒಟ್ಟಿನಲ್ಲಿ ರಾಹುಲ್‌ ಗಾಂಧಿಯವರ ಹೆಸರೇ ಕೇಳಿಬರುತ್ತಿದ್ದರೂ ಇಂಡಿಯಾ ಒಕ್ಕೂಟದಲ್ಲಿ ಪ್ರತಿಪಕ್ಷ ನಾಯಕ ಯಾರು ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ವಿದೇಶಿ ಗಣ್ಯರು, ಪೌರಕಾರ್ಮಿಕರು- ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?

Share This Article