ಮಾಧವನ್ ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ- ತಮಿಳು ಚಿತ್ರ ಮಾಡ್ತಿದ್ದಾರಾ ನಟಿ?

Public TV
1 Min Read

ಸ್ಯಾಂಡಲ್‌ವುಡ್ ನಟಿ ಮೇಘಾ ಶೆಟ್ಟಿ (Megha Shetty) ಸದ್ಯ ‘ಗ್ರಾಮಾಯಣ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸೌತ್ ನಟ ಆರ್. ಮಾಧವನ್ (Madhavan) ಜೊತೆ ಮೇಘಾ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ, ನಟಿ ತಮಿಳು ಸಿನಿಮಾ ಮಾಡ್ತಿದ್ದಾರಾ? ಎಂಚ ಚರ್ಚೆ ಶುರುವಾಗಿದೆ.

‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಗಮನ ಸೆಳೆದ ಮೇಘಾ ಶೆಟ್ಟಿ ಇದೀಗ ಮಾಧವನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಅದ್ಭುತ ನಟನೊಂದಿಗೆ ಚರ್ಚೆ ಮಾಡುತ್ತಾ ಸಮಯ ಕಳೆದೆ. ಒಂದೊಳ್ಳೆಯ ಕಲಿಕೆಯ ಅನುಭವ ಎಂದು ನಟಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ವೈರಲ್ ಆಗ್ತಿದ್ದಂತೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಮಾಧವನ್ ಜೊತೆ ನಟಿ ತಮಿಳು ಸಿನಿಮಾ ಮಾಡ್ತಿದ್ದಾರಾ? ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾರಂತೆಯೇ ಮೇಘಾ ಶೆಟ್ಟಿ ಕೂಡ ಪರಭಾಷೆಗಳಲ್ಲಿ ಬ್ಯುಸಿಯಾಗ್ತಾರಾ? ಎಂಬ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ. ನೆಟ್ಟಿಗರ ಚರ್ಚೆಗೂ ಗ್ರಾಸವಾಗಿದೆ. ಇದನ್ನೂ ಓದಿ:ಡಾಲಿ ಧನಂಜಯ ನಟನೆಯ ‌’ಕೋಟಿ’ ಟ್ರೈಲರ್‌ ಔಟ್

ಅಂದಹಾಗೆ, ‘ಆಪರೇಷನ್ ಲಂಡನ್ ಕಫೆ’ ಸಿನಿಮಾ ಹಲವು ಭಾಷೆಗಳಲ್ಲಿ ಮೂಡಿ ಬಂದಿದೆ. ಪ್ರಜ್ವಲ್ ದೇವರಾಜ್ ಜೊತೆ ಚೀತಾ, ವಿನಯ್ ರಾಜ್‌ಕುಮಾರ್ ಜೊತೆ ಗ್ರಾಮಾಯಣ ಸೇರಿದಂತೆ ಹಲವು ಚಿತ್ರಗಳು ಮೇಘಾ ಶೆಟ್ಟಿ ಕೈಯಲ್ಲಿವೆ.

Share This Article